ದೆಹಲಿ: ಅಮರ್ ಪ್ರೀತ್ ಸಿಂಗ್ ಅವರ ಉತ್ತರಾಧಿಕಾರಿಯಾಗಿ, ಅಶುತೋಷ್ ದೀಕ್ಷಿತ್ ಅವರು ಭಾರತೀಯ ವಾಯುಪಡೆಯ 29ನೇ 'ಏರ್ ಚೀಫ್ ಮಾರ್ಷಲ್' ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ವೃತ್ತಿಯಲ್ಲಿ ಫೈಟರ್ ಪೈಲಟ್ ಆಗಿರುವ ದೀಕ್ಷಿತ್ ಅವರು, ಮಿರಾಜ್-2000, ಜಾಗ್ವಾರ್, ವಿವಿಧ ಮಾದರಿಯ ಮಿಗ್ ವಿಮಾನಗಳು, ತೇಜಸ್ ಹಾಗೂ ಹಾಕ್‌ನಂತಹ ಯುದ್ಧ ವಿಮಾನಗಳನ್ನು ಹಾರಿಸಿದ 3,500 ಗಂಟೆಗಳಿಗೂ ಹೆಚ್ಚು ಅನುಭವವನ್ನು ಹೊಂದಿದ್ದಾರೆ. 1986ರಲ್ಲಿ ಭಾರತೀಯ ವಾಯುಪಡೆಗೆ ಸೇರಿರುವ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.