ಚಿತ್ರದುರ್ಗ: ಹಾಸನಾಂಬೆ ದೇವಿ ಜಾತ್ರೆ ಪ್ರಯುಕ್ತ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗದಿಂದ ಚಿತ್ರದುರ್ಗ - ಹಾಸನ - ಚಿತ್ರದುರ್ಗ ಮಾರ್ಗದಲ್ಲಿ ವಿಶೇಷ ವಾಹನ ಸೌಲಭ್ಯ ಕಲ್ಪಿಸಲಾಗಿದೆ.
ಈ ವಿಶೇಷ ಬಸ್ ಸೌಲಭ್ಯವು ನವೆಂಬರ್ 01 ರಿಂದ 10 ರವರೆಗೆ ಕಾರ್ಯಚರಣೆ ನಡೆಸಲಿದೆ. ಚಿತ್ರದುರ್ಗದಿಂದ ಹಾಸನಕ್ಕೆ ಹೊರಡುವ ಬಸ್ಸು ಪ್ರತಿದಿನ ಬೆಳಿಗ್ಗೆ 6.30 ಗಂಟೆಗೆ ಹಾಗೂ ಹಾಸನದಿಂದ ಚಿತ್ರದುರ್ಗಕ್ಕೆ ಹಿಂತಿರುಗುವ ಬಸ್ಸು ಮಧ್ಯಾಹ್ನ 15:00 ಗಂಟೆಗೆ ಹೊರಡಲಿದೆ.
ಪ್ರಯಾಣಿಕರು ತಮ್ಮ ಆಸನಗಳನ್ನು ನಿಗಮದ ವೆಬ್‍ಸೈಟ್ www.ksrtc.in ಮೂಲಕ ಮುಂಗಡವಾಗಿ ಕಾಯ್ದಿರಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಹಾಗೂ ಭಕ್ತಾದಿಗಳು ಈ ವಿಶೇಷ ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೋರಿದ್ದಾರೆ.