ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ 44 ಅಂಗನವಾಡಿ ಕಾರ್ಯಕರ್ತೆ ಹಾಗೂ 172 ಅಂಗನವಾಡಿ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಆಫ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಭರಮಸಾಗರ ವ್ಯಾಪ್ತಿಯಲ್ಲಿ 7 ಕಾರ್ಯಕರ್ತೆ ಹಾಗೂ 17 ಸಹಾಯಕಿ, ಚಿತ್ರದುರ್ಗ 1 ಕಾರ್ಯಕರ್ತೆ ಹಾಗೂ 17 ಸಹಾಯಕಿ, ಚಳ್ಳಕೆರೆ 12 ಕಾರ್ಯಕರ್ತೆ ಹಾಗೂ 25 ಸಹಾಯಕಿ, ಹಿರಿಯೂರು 9 ಕಾರ್ಯಕರ್ತೆ ಹಾಗೂ 52 ಸಹಾಯಕಿ, ಹೊಳಲ್ಕೆರೆ 3 ಕಾರ್ಯಕರ್ತೆ ಹಾಗೂ 26 ಸಹಾಯಕಿ, ಹೊಸದುರ್ಗ 11 ಕಾರ್ಯಕರ್ತೆ ಹಾಗೂ 21 ಸಹಾಯಕಿ, ಮೊಳಕಾಲ್ಮುರು 1 ಕಾರ್ಯಕರ್ತೆ ಹಾಗೂ 14 ಸಹಾಯಕಿ ಹುದ್ದೆಗಳು ಖಾಲಿಯಿವೆ.
19 ರಿಂದ 35 ವರ್ಷದೊಳಗಿನ ಅರ್ಹ ಸ್ಥಳೀಯ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಡಿ.2 ರ ಸಂಜೆ 5:30 ರಳೊಗಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.