ಚಿತ್ರದುರ್ಗ : ಶಿಕ್ಷಣದ ಒಂದು ಭಾಗವಾಗಿರುವ ಚಿತ್ರಕಲೆಯಿಂದ ಮಕ್ಕಳಲ್ಲಿ ಜ್ಞಾನ ಹೆಚ್ಚುತ್ತದೆ. ಬರವಣಿಗೆ ಶೈಲಿ ಮುಖ್ಯ ಎಂದು ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ತಿಳಿಸಿದರು.
ಕಲಾ ಚೈತನ್ಯ ಸೇವಾ ಸಂಸ್ಥೆ, ಸಾಂಸ್ಕøತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಚಿತ್ರಕಲಾ ಪ್ರದರ್ಶನ ಮತ್ತು ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಿತ್ರಕಲೆಗಳಿಗೂ ಶಿಕ್ಷಣದಲ್ಲಿ ಅಂಕವಿದೆ. ಯೋಗ, ಸಂಗೀತ, ನಾಟಕ ಪ್ರತಿಯೊಂದು ಕಲಾತ್ಮಕ ಕೌಶಲ್ಯವಿದ್ದಂತೆ. ಹಾಗಾಗಿ ಚಿತ್ರಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಚಿತ್ರಕಲೆಯಿಂದ ಮಕ್ಕಳಲ್ಲಿ ಹೊಸ ಚೈತನ್ಯ ಮೂಡುತ್ತದೆ. ಪ್ರೋತ್ಸಾಹವಿಲ್ಲದೆ ಚಿತ್ರಕಲಾವಿದರು ನಲುಗುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಕಣ್ಣೇಶ್ ಸಿ. ಮಾತನಾಡಿ ಕಲಾ ಚೈತನ್ಯ ಸೇವಾ ಸಂಸ್ಥೆ ಸುಮಾರು ವರ್ಷಗಳಿಂದಲೂ ಕಲಾ ಕೃತಿಗಳನ್ನು ಪ್ರದರ್ಶಿಸುತ್ತಾ ಬರುತ್ತಿದೆ. ಚಿತ್ರಕಲೆ ಡಿಜಿಟಲಿಕರಣವಾಗುತ್ತಿರುವುದರಿಂದ ಆವಿಷ್ಕಾರ ಸವಾಲಾಗಿದೆ. ರಾಜರವಿವರ್ಮ ಪಾಶ್ಚಿಮಾತ್ಯ ಚಿತ್ರಕಲೆಯನ್ನು ಭಾರತದಲ್ಲಿ ಆರಂಭಿಸಿದರು. ಚಿತ್ರಕಲಾವಿದರಿಗೆ ವಿಶೇಷವಾದ ಗೌರವವಿದೆ. ಭಾವನೆಗಳನ್ನು ಚಿತ್ರಕಲೆಯ ಮುಖಾಂತರ ಹೊರಸೂಸುವ ತಾಕತ್ತು ಚಿತ್ರಕಲಾವಿದರಲ್ಲಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರಕಲೆ ಕಣ್ಮರೆಯಾಗುತ್ತಿದೆ. ಶಿಕ್ಷಣವೆಂದರೆ ಕೇವಲ ಪುಸ್ತಕವಲ್ಲ. ಕಲಾ ಪ್ರಕಾರ ಕೂಡ ಶಿಕ್ಷಣವಾಗಿರುವುದರಿಂದ ಚಿತ್ರಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಹೇಳಿದರು.
ಕಲಾ ಚೈತನ್ಯ ಸೇವಾ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ಬೇದ್ರೆ ಮಾತನಾಡುತ್ತ ಶಿಕ್ಷಣಕ್ಕೆ ಚಿತ್ರಕಲೆ ಬೇಕು. ಪುಟಾಣಿ ಮಕ್ಕಳಲ್ಲಿ ಚಿತ್ರಕಲೆಯಿರುತ್ತದೆ. ಸೃಜನಶೀಲತೆ ಮುಖ್ಯ. ಚಿತ್ರಕ್ಕೆ ಅಡಚಣೆಯಿಲ್ಲ. ಮಕ್ಕಳು ಹೇಗೆ ಬಿಡಿಸಿದರೂ ಅದೊಂದು ಚಿತ್ರವಾಗುತ್ತದೆ. ಚಿತ್ರದ ಮೂಲಕ ಶಾಲೆಗಳಲ್ಲಿ ಪಾಠ ಮಾಡಿದರೆ ಮಕ್ಕಳು ಬೇಗನೆ ಗ್ರಹಿಸುತ್ತಾರೆ. ಚಿತ್ರದಿಂದ ಕೈಬರವಣಿಗೆ ಶಕ್ತಿ ಹೆಚ್ಚಾಗುತ್ತದೆ. ಚಿತ್ರಕಲೆಯಲ್ಲಿ ಮಕ್ಕಳನ್ನು ಉತ್ತೇಜಿಸಲು ಮುಂದಿನ ದಿನಗಳಲ್ಲಿ ಡಿಸಿ. ಸರ್ಕಲ್ನಲ್ಲಿ ಚಿತ್ರಸಂತೆ ಮಾಡುವುದಾಗಿ ನುಡಿದರು.
ಮಕ್ಕಳನ್ನು ಸ್ವತಂತ್ರವಾಗಿ ಚಿತ್ರ ಬಿಡಸಲು ಬಿಟ್ಟಾಗ ಅವರ ಬುದ್ದಿಶಕ್ತಿ ಕಲಿಕಾ ಸಾಮಥ್ರ್ಯ ಹೆಚ್ಚುತ್ತದೆಂದರು.
ಯೋಗ ಶಿಕ್ಷಕ ಎಂ.ಬಿ.ಮುರುಳಿ, ಬಾಪೂಜಿ ಶಿಕ್ಷಣ ಸಂಸ್ಥೆಯ ಉಪ ಪ್ರಾಚಾರ್ಯರಾದ ಶಿವಕುಮಾರ್, ಚಿತ್ರಕಲಾ ಶಿಕ್ಷಕ ಜವಳಿ ಶಾಂತಕುಮಾರ್ ಇವರುಗಳು ವೇದಿಕೆಯಲ್ಲಿದ್ದರು. ಮಾರುತಿ, ಶೃತಿ, ಅಮೂಲ್ಯ, ಬೋರೇಶ್, ಬಿಇಡಿ. ಕಾಲೇಜಿನ ಪ್ರಾಧ್ಯಾಪಕರಾದ ಹನುಮಂತರೆಡ್ಡಿ ಹಾಗೂ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.