ವಚನ: - -ಜೇಡರ ದಾಸಿಮಯ್ಯ
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಭಕ್ತಿಯ ಬಲ್ಲವರಿಗೆ ಸತ್ಯ ಸದಾಚಾರವ ಹೇಳಿದಡೆ
ನಂಬುವರು, ನಚ್ಚುವರು, ಮಚ್ಚುವರು.
ಭಕ್ತಿಯ ಹೊಲಬನರಿಯದ ವ್ಯರ್ಥರಿಗೆ
ಸತ್ಯ ಸದಾಚಾರವ ಹೇಳಿದಡೆಕಚ್ಚುವರು, ಬಗುಳುವರು ಕಾಣಾ! ರಾಮನಾಥ.
-ಜೇಡರ ದಾಸಿಮಯ್ಯ