ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಆಹ್ವಾನ
ಬೆಂ. ಗ್ರಾ. ಜಿಲ್ಲೆ: ಜಿಲ್ಲಾ ಇ- ಆಸ್ಪತ್ರೆ ಪ್ರೋಗ್ರಾಮರ್ ಹುದ್ದೆಗೆ ನೇರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು BE/B.Tech in CSE/ISE/IT ಅಥವಾ M.Tech ( CS/IT) ಅಥವಾ MCA ವಿದ್ಯಾಹರ್ತೆ ಹಾಗೂ ಸಾಫ್ಟ್ವೇರ್ ಪ್ರೋಗ್ರಾಮರ್/ಡೆವಲಪರ್ ಆಗಿ ಐಟಿ (IT) ಉದ್ಯಮದಲ್ಲಿ 3 ವರ್ಷಗಳ ಅನುಭವ, HTML, XML, Javascript, ASP, NET, Java, Postage SQL ಮುಂತಾದವುಗಳಲ್ಲಿ ಪರಿಣಿತಿ ಅನುಭವವನ್ನು ಹೊಂದಿರಬೇಕು. ಸಂಚಿತ ವೇತನ 29000/- ನೀಡಲಾಗುತ್ತದೆ.
ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 07 ರಂದು ಬೆಳಿಗ್ಗೆ 10.30 ರಿಂದ 11.30 ಗಂಟೆಯೊಳಗೆ ರೂಂ ನಂ. 08, ಜಿಲ್ಲಾ ಕೋವಿಡ್ ವಾರ್ ರೂಂ, ಜಿಲ್ಲಾಡಳಿತ ಭವನ, ನೆಲಮಹಡಿ ಬೀರಸಂದ್ರ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562110 ಇಲ್ಲಿಗೆ ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-29787452 ಇ-ಮೇಲ್ - [email protected] ಅನ್ನು ಸಂಪರ್ಕಿಸಲು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.