LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕ 40 ಸಾವಿರ ಲಂಚ ಸ್ವೀಕಾರ ಲೋಕಾಯುಕ್ತ ಬಲೆಗೆ.!

ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕ 40 ಸಾವಿರ ಲಂಚ ಸ್ವೀಕಾರ ಲೋಕಾಯುಕ್ತ ಬಲೆಗೆ.!ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕ 40 ಸಾವಿರ ಲಂಚ ಸ್ವೀಕಾರ ಲೋಕಾಯುಕ್ತ ಬಲೆಗೆ.!

 

ಕೊಪ್ಪಳ: ವಿಲ್ ಮೂಲಕ ಬಂದಿರುವ ಜಮೀನಿನ ಉತಾರ ಮಾಡಿಸಿಕೊಡಲು ರೂ. 40,000 ಲಂಚ ಸ್ವೀಕರಿಸುತ್ತಿದ್ದ ಸಂಗಾಪುರದ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕ ಅಕ್ಟೋಬರ್ 6ರಂದು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸಂಗಾಪುರದ ಗ್ರಾಮ ಆಡಳಿತಾಧಿಕಾರಿ ಸೋಮನಾಥ ಟಿ. ಹಾಗೂ ಗ್ರಾಮ ಸಹಾಯಕ ಹನುಮೇಶ ಬಂಡಿ ಆಂಜನೇಯ ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆಯ ವಿವರ: ಗಂಗಾವತಿ ತಾಲೂಕಿನ ಅಂಜನಹಳ್ಳಿ ನಿವಾಸಿ ರಾಮು ತಂದೆ ವೆಂಕಟೇಶ ಎಂಬುವವರಿಗೆ ತಮ್ಮ ಸಣ್ಣಜ್ಜನಿಂದ ವಿಲ್ ಮೂಲಕ ಜಮೀನು ಬಂದಿತ್ತು. ಈ ಜಮೀನಿನ ದಾಖಲೆಗಳನ್ನು(ಉತಾರ) ತಮ್ಮ ಹೆಸರಿಗೆ ಮಾಡಿಸಿಕೊಡುವಂತೆ ಅವರು ಗಂಗಾವತಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಕೆಲಸ ಮಾಡಿಕೊಡಲು ಗ್ರಾಮ ಆಡಳಿತಾಧಿಕಾರಿ ಸೋಮನಾಥ ಟಿ. ಹಾಗೂ ಗ್ರಾಮ ಸಹಾಯಕ ಹನುಮೇಶ ರೂ. 40,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಕುರಿತು ರಾಮು ಅವರು ಅಕ್ಟೋಬರ್ 5 ರಂದು ಕೊಪ್ಪಳದ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.

 ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಮಂಗಳವಾರ (ಅಕ್ಟೋಬರ್ 6) ಮಧ್ಯಾಹ್ನ ಸುಮಾರು 12:40ರ ವೇಳೆಗೆ ಫಿರ್ಯಾದಿ ರಾಮು ಅವರಿಂದ ರೂ. 40,000 ಲಂಚದ ಹಣವನ್ನು ಪಡೆಯುತ್ತಿದ್ದಾಗ ಇಬ್ಬರೂ ಅಧಿಕಾರಿಗಳನ್ನು ರೆಡ್‌ಹ್ಯಾಂಡ್‌ ಆಗಿ ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಂದ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಮ್ಮ ಶ ತ್ರು ಸಂಹಾರ ನಿಮ್ಮ ಕಣ್ಣು ಮುಂದೆ ನಿಮ್ಮ ಶತ್ರುಗಳು ಸದೆಬಡಿಯಿರಿ ನಿಮ್ಮ ತಂಟೆಗೆ ಬರುವುದಿಲ್ಲ.?ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣ: ಕೆಪಿಎಸ್‌ಸಿ ಸದಸ್ಯೆ ಗೀತಾ ಇಡಿ ವಶಕ್ಕೆ.!ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕ 40 ಸಾವಿರ ಲಂಚ ಸ್ವೀಕಾರ ಲೋಕಾಯುಕ್ತ ಬಲೆಗೆ.!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 07-10-2026ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗವಕಾಶ ಸೃಜನೆಗೆ ಜಿಲ್ಲಾಧಿಕಾರಿ ಎಸ್.ರಮ್ಯ ಸೂಚನೆವಸತಿ ರಹಿತರಿಗೆ ಮನೆಗಳನ್ನು ಕಟ್ಟಿಸಿಕೊಡುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ.!ವಾಹನಗಳ ದಟ್ಟಣೆ ಇರುವ ಕಡೆ ಗುಣ ಮಟ್ಟದ ಹಂಪ್ಸ್ಗಳನ್ನು ಅಳವಡಿಸಲು ಮನವಿ.!ಆಸಿಡ್ ಸಂತ್ರಸ್ತರಿಗೆ ಮಾನಸಿಕ, ಸಾಮಾಜಿಕ ಬೆಂಬಲ ಅಗತ್ಯ : ನ್ಯಾಯಾಧೀಶರಾದ ಜಿ.ಡಿ. ಮಹಾವರ್ಕರ್ವಚನ:  -ಸೊಡ್ಡಳ ಬಾಚರಸನಿಮ್ಮ ಮಕ್ಕಳು ತುಂಬಾ ಮಂಕು ಇದ್ರೆ ಓದಲ್ಲ ಮತ್ತು ಹೇಳಿದ ಮಾತು ಕೇಳೋದಿಲ್ಲ ಅಂದರೆ ಹೀಗೆ ಮಾಡಿರಿ..!?