ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಕರ್ತಾರನಟ್ಟಿದ ವಿಧಿಗಂಜಿ, ಪಾತಾಳಲೋಕದಲ್ಲಿ ಹೊಕ್ಕಡಗಿದಡೆ,
ಭೂತಳದ ಮೇಲೆ ಹೊಮ್ಮರೆಯಾಗಿ ಹರಿದಡೆ, ಕೊಲ್ಲದೆ ವಿಧಿ ?
ತಪ್ಪು ತಡೆಯಿಲ್ಲದ ತಪಸಿಗಪ್ಪುದೆ ಶಲದ ವಿಧಿ ?
ಹರನಟ್ಟಿದ ಬೆಸನದಿಂದ ಮೆಕ್ಕೆ ಹಾವಾಗಿ ತಿನ್ನದೆ ವಿಧಿ ?
ದೇವ ದಾನವ ಮಾನವರ ಒಕ್ಕಲಿಕ್ಕಿ ಕೊಲ್ಲದೆ ವಿಧಿ ?ಮುಕ್ಕಣ್ಣ ಸೊಡ್ಡಳನಾಣತಿವಿಡಿದು.
-ಸೊಡ್ಡಳ ಬಾಚರಸ