ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಕಾಯದಿಂದ ತೋರುವದು ಪ್ರಪಂಚವಲ್ಲ,
ಜೀವದಿಂದ ತೋರುವದು ಪ್ರಪಂಚವಲ್ಲ,
ಅದಂ ತದ್ಭಾವದಿಂದ ತೋರುವದೆ ಪ್ರಪಂಚುಯೆಂಬುದನರಿದು
ಸದ್ಭಾವಕ್ಕೊಡಲೆಂಬುದ ಕಂಡು,
ಅರಿದು ಮರೆದಲ್ಲಿ ನಿಃಪ್ರಪಂಚು, ಅರಿದಲ್ಲಿ ಪ್ರಪಂಚು.
ಉಭಯದ ತೆರದರಿಸಿನ ಕುರುಹುದೋರದೆ
ಅಡಗಿ ನಿಷ್ಪತ್ತಿಯಾದುದು,ಗಾರುಡೇಶ್ವರಲಿಂಗವನರಿದುದು.
-ಉಪ್ಪರಗುಡಿಯ ಸೋಮಿದೇವಯ್ಯ