-ಪ್ರಸಾದಿ ಭೋಗಣ್ಣ ಅವರ ವಚನ
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಬೀಜವ ಕಳೆದು ತರು ಬೆಳೆದಂತೆ
ತರುವ ಕಳೆದು ಬೀಜ ಆ ತರುವಿಂಗೆ ಕುರುಹಾದಂತೆ
ಪರಮ ಜೀವನ ಕಳೆದು
ಆ ಜೀವಕ್ಕೆ ತಾ ಪರಮನೆಂಬ ಪರಿಭ್ರಮಣವ ಕಳೆದು ಪರಶಕ್ತಿಸಮೇತವಾದಲ್ಲಿ
ಮರದಲ್ಲಿ ಹುಟ್ಟಿದ ಕಿಚ್ಚು, ಮರ ನಷ್ಟವಾಗಿ ತಾ ನಷ್ಟವಾದಂತೆ
ಅರಿದ ಅರಿವು ಕುರುಹಿನಲ್ಲಿ ಪರಿಹರಿಸಿದ ಮತ್ತೆ
ತೆರೆ ದರುಶನ ಉಭಯವಡಗಿತ್ತುಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿದಲ್ಲಿ.
-ಪ್ರಸಾದಿ ಭೋಗಣ್ಣ