ಹೈದರಬಾದ್ : ನಟಿ ರಶ್ಮಿಕಾ ಮಂದಣ್ಣ ಶೂಟಿಂಗ್ ವೇಳೆ ತೀವ್ರ ಸ್ವರೂಪದ ಗಾಯಕ್ಕೆ ಒಳಗಾಗಿದ್ದಾರೆ. ಆ್ಯಕ್ಷನ್ ಹಾಗೂ ಡ್ಯಾನ್ಸ್ ಸನ್ನಿವೇಶಗಳ ಚಿತ್ರೀಕರಣದ ವೇಳೆ ಅವರ ಸೊಂಟದ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ವೈದ್ಯರು ಸುಮಾರು 6 ವಾರಗಳ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿರುವುದಾಗಿ ವರದಿಯಾಗಿದೆ.
ರಶ್ಮಿಕಾ ಗಾಯಗೊಂಡಿರುವ ವಿಷಯ ತಿಳಿದು ಅತ್ತ ಫ್ಯಾನ್ಸ್ ಕೂಡ ಆತಂಕಕ್ಕೆ ಒಳಗಾಗಿದ್ದಾರೆ. 'ರಣಬಾಲಿ' ಮತ್ತು 'ಮೈಸಾ' ಸಿನಿಮಾಗಳ ಶೂಟಿಂಗ್ ಸಂದರ್ಭದಲ್ಲಿ ಕಠಿಣ ಆ್ಯಕ್ಷನ್ ಮಾಡುವಾಗ ಗಾಯಗೊಂಡಿದ್ದಾರೆ.