ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ವಾರ ತಿಥಿ ಲಗ್ನಂಗಳೆಂದು ಬೇರೊಂದ ಮಾಡುವನ್ನಬರ
ತ್ರಿವಿಧಪೂಜೆ ಕೆಟ್ಟಿತ್ತು.
ಗುರುಲಿಂಗಜಂಗಮದ ಅನುವನರಿತುದೆ ನೇಮ.
ಕಾಲ ಉಚಿತಕ್ಕೆ ಬಂದುದ ಕೂಡಿಕೊಂಬುದೆ ನಿತ್ಯ.ಈ ಗುಣ ಅಮರೇಶ್ವರಲಿಂಗವ ಕೂಡುವ ಕೂಟ.
-ಆಯ್ದಕ್ಕಿ ಮಾರಯ್ಯ