LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಸಿಎಂ ಎಕ್ಸ್ ಖಾತೆಯಲ್ಲಿ ರೈತರ ಬಗ್ಗೆ ಹಂಚಿಕೊಂಡ ಪೋಸ್ಟ್ ಇದು.!

ಸಿಎಂ ಎಕ್ಸ್ ಖಾತೆಯಲ್ಲಿ ರೈತರ ಬಗ್ಗೆ ಹಂಚಿಕೊಂಡ ಪೋಸ್ಟ್ ಇದು.!

 

ಬೆಂಗಳೂರು: ರಾಜ್ಯದ ರೈತರಿಗೆ ಬರ ಪರಿಹಾರದ ಕುರಿತು ಯಾವುದೇ ಗೊಂದಲ ಬೇಡ. ಮೊದಲ ಕಂತಿನಲ್ಲಿ ಬಿಡುಗಡೆಯಾಗಿರುವ ಹಣವೇ ಅಂತಿಮವಲ್ಲ. ಎಲ್ಲಾ ಅರ್ಹ ರೈತರಿಗೆ ಕನಿಷ್ಠ ₹5,000 ಬರ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮೊದಲ ಕಂತಿನಲ್ಲಿ ₹2,000 ಅಥವಾ ₹2,500 ಪಡೆದಿರುವ ರೈತರಿಗೆ ಉಳಿದ ಬಾಕಿ ಹಣವನ್ನು ಮುಂದಿನ ಕಂತಿನಲ್ಲಿ ಪಾವತಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದಲ್ಲದೆ, ಬೆಳೆ ನಷ್ಟದ ಪ್ರಮಾಣ ಹಾಗೂ ಅನ್ವಯಿಸುವ ನಿಯಮಗಳ ಆಧಾರದ ಮೇಲೆ ಅರ್ಹ ರೈತರು ₹60,000ವರೆಗೆ ಇನ್‌ಪುಟ್ ಸಬ್ಸಿಡಿ ನೆರವು ಪಡೆಯಲು ಅವಕಾಶವಿದೆ. ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ.ಹೀಗಾಗಿ, ಮೊದಲ ಕಂತಿನಲ್ಲಿ ಕಡಿಮೆ ಹಣ ಬಂದಿದೆ ಎಂದು ರೈತರು ಆತಂಕಪಡುವ ಅಗತ್ಯವಿಲ್ಲ. ಬಾಕಿ ಮೊತ್ತವನ್ನು ಮುಂದಿನ ಕಂತಿನಲ್ಲಿ ಪಾವತಿಸಲಾಗುವುದು. ಬರ ಪರಿಹಾರದ ಕುರಿತು ಹರಿದಾಡುವ ತಪ್ಪು ಮಾಹಿತಿ ಹಾಗೂ ವದಂತಿಗಳಿಗೆ ರೈತರು ಕಿವಿಗೊಡಬಾರದು ಎಂದು ಮನವಿ ಮಾಡಲಾಗಿದೆ.ಈ ಕುರಿತು ಸಿಎಂ ಡಿಕೆ ಶಿವಕುಮಾರ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಬರ ಪರಿಹಾರದ ಬಗ್ಗೆ ಗೊಂದಲ ಬೇಡ; ಎಲ್ಲ ಅರ್ಹ ರೈತರಿಗೂ ₹5,000 ನೆರವು ರಾಜ್ಯದ ರೈತ ಬಾಂಧವರಲ್ಲಿ ಬರ ಪರಿಹಾರದ ಕುರಿತು ಯಾವುದೇ ಗೊಂದಲ ಬೇಡ. ಮೊದಲ ಕಂತಿನಲ್ಲಿ ಬಿಡುಗಡೆಯಾಗಿರುವ ಹಣವೇ ಅಂತಿಮವಲ್ಲ. SDRF/NDRF ನಿಯಮಗಳಡಿ ಮಳೆಯಾಶ್ರಿತ, ನೀರಾವರಿ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಕ್ರಮವಾಗಿ ₹1,500, ₹2,600 ಮತ್ತು ₹3,200 ಕನಿಷ್ಠ ಪರಿಹಾರ ನಿಗದಿಯಾಗಿದೆ. ಆದರೆ, ರಾಜ್ಯ ಸರ್ಕಾರ ಈ ಮೂರೂ ವರ್ಗದ ಬೆಳೆಗಳಿಗೂ ಕನಿಷ್ಠ ₹5,000 ಬರ ಪರಿಹಾರ ನೀಡಲಿದೆ. ಈ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಮೊದಲ ಕಂತಿನಲ್ಲಿ ₹2,000 ಅಥವಾ ₹2,500 ಪಡೆದ ರೈತರಿಗೆ ಬಾಕಿ ಹಣ ಮುಂದಿನ ಕಂತಿನಲ್ಲಿ ಪಾವತಿಯಾಗಲಿದೆ. ಅರ್ಹ ರೈತರು ಬೆಳೆ ನಷ್ಟದ ಆಧಾರದ ಮೇಲೆ ₹60,000ವರೆಗೆ ಇನ್‌ಪುಟ್ ಸಬ್ಸಿಡಿ ನೆರವನ್ನು ಪಡೆಯಬಹುದು. ರೈತರಿಗೆ ಪೂರ್ಣ ಪರಿಹಾರ ತಲುಪಿಸಲು ಸರ್ಕಾರ ಬದ್ಧವಾಗಿದ್ದು, ತಪ್ಪು ಮಾಹಿತಿ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸಿಎಂ ಡಿಕೆ ಶಿವಕುಮಾರ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಮಾಯಣ' ಚಿತ್ರ: ಇಲ್ಲಿಗೆ ಎಷ್ಟು ಕಲೆಕ್ಷನ್ .?ದಂಪತಿಗಳಲ್ಲಿ ಇದ್ದಕ್ಕಿದ್ದ ಹಾಗೆ ಮನಸ್ತಾಪ ಬಂದು ವಿಚ್ಛೇದನಾಗಲಿಕ್ಕೆ ಜಾತಕಗಳ ಪ್ರಕಾರ ಇಂತಹ ಗ್ರಹಗಳು ಕಾರಣವಾ ತಿಳಿಯಿರಿ?ಸಿಎಂ ಎಕ್ಸ್ ಖಾತೆಯಲ್ಲಿ ರೈತರ ಬಗ್ಗೆ ಹಂಚಿಕೊಂಡ ಪೋಸ್ಟ್ ಇದು.!11-11-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿವಚನ.: -ಸಿದ್ಧರಾಮೇಶ್ವರಕರಿಕಾಳು ಮೆಣಸಿನಿಂದ ಈ ತಂತ್ರ ಮಾಡಿದರೆ ಸ್ತ್ರೀ ಪುರುಷ ವಶೀಕರಣ ವಾಗುತ್ತದೆ ಒಳ್ಳೆಯ ಉದ್ದೇಶಕ್ಕೆ ಇಷ್ಟ ಪಟ್ಟಂತ ವ್ಯಕ್ತಿಗಳಿಗಾಗಿ ಈ ತಂತ್ರ ಮಾಡಿ!ಸರ್ಕಾರಿ ನೌಕರರು 48 ಗಂಟೆಗಳಿಗೂ ಹೆಚ್ಚು ಕಾಲ ಜೈಲು ಅಥವಾ ಕಷ್ಟಡಿಲ್ಲಿ ಇದ್ರೆ ಅಮಾನತ್BDA ವತಿಯಿಂದ ನಿವೇಶನ ಪಡೆದು ಖಾಲಿ ಬಿಟ್ಟಿದ್ದರೆ ತೆರಿಗೆ ಹೆಚ್ಚಳ.!ಗ್ಯಾರಂಟಿ ಯೋಜನೆಗಳ ಜೊತೆಗೆ ಕ್ಷೇತ್ರಗಳ ಅಭಿವೃದ್ಧಿಗೂ ಆದ್ಯತೆ: ಸಚಿವ ಟಿ.ರಘುಮೂರ್ತಿಎಸ್‌ಸಿ/ಎಸ್‌ಟಿ ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ.