ಬೆಂಗಳೂರು: ಬೆಂಗಳೂರಿನಲ್ಲಿ ಬಿಡಿಎ (BDA) ವತಿಯಿಂದ ನಿವೇಶನ ಪಡೆದು ವರ್ಷಗಳಾದರೂ ಮನೆ ನಿರ್ಮಿಸದೆ ಖಾಲಿ ಬಿಟ್ಟಿದ್ದೀರಾ? ಹಾಗಿದ್ದರೆ ಇನ್ಮುಂದೆ ಎಚ್ಚರಿಕೆಯಿಂದಿರಿ. ನಿವೇಶನಗಳನ್ನು ಖಾಲಿ ಬಿಟ್ಟು ನಿರ್ಲಕ್ಷ್ಯ ಮಾಡುವ ಮಾಲೀಕರಿಗೆ ನೋಟಿಸ್ ಜಾರಿ ಮಾಡುವುದರ ಜೊತೆಗೆ ತೆರಿಗೆ ಹೆಚ್ಚಳದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಿಎಯಿಂದ ಹಂಚಿಕೆಯಾದ ನಿವೇಶನಗಳನ್ನು ಖಾಲಿ ಬಿಡದೆ, ನಿಗದಿತ ಅವಧಿಯೊಳಗೆ ಮನೆ ನಿರ್ಮಿಸಿಕೊಳ್ಳಬೇಕು ಎಂದು ಸೂಚಿಸಿದರು.
ಖಾಲಿ ನಿವೇಶನಗಳಿಗೆ ನೋಟಿಸ್, ತೆರಿಗೆ ಹೆಚ್ಚಳದ ಎಚ್ಚರಿಕೆ. ನಗರದಲ್ಲಿ ಬಿಡಿಎ ನಿವೇಶನಗಳನ್ನು ಪಡೆದುಕೊಂಡು ಮನೆ ನಿರ್ಮಿಸದೆ ಖಾಲಿ ಬಿಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಸುಳಿವನ್ನು ಸಿಎಂ ನೀಡಿದ್ದಾರೆ. ನಿವೇಶನಗಳನ್ನು ಕಸದ ತೊಟ್ಟಿಗಳನ್ನಾಗಿ ಮಾಡದೆ, ಕನಿಷ್ಠ ಕಾಂಪೌಂಡ್ ನಿರ್ಮಿಸಿ ರಕ್ಷಿಸಿಕೊಳ್ಳಬೇಕು ಅಥವಾ ಮನೆ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿವೇಶನಗಳನ್ನು ದೀರ್ಘಕಾಲ ಖಾಲಿ ಬಿಟ್ಟರೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಗತ್ಯವಿದ್ದರೆ ತೆರಿಗೆ ಹೆಚ್ಚಳದ ಕ್ರಮವನ್ನೂ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಿಡಿಎ ನಿಯಮಾವಳಿಗಳ ಪ್ರಕಾರ ನಿಗದಿತ ಅವಧಿಯೊಳಗೆ ಕಟ್ಟಡ ನಿರ್ಮಿಸಿಕೊಳ್ಳುವುದು ಕಡ್ಡಾಯ ಎಂದು ಹೇಳಿದರು.