LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಮೆಡಿಕಲ್ ಕಾಲೇಜಿನ ಡೀನ್ ಬಿ.ವೈ.ಯುವರಾಜ್ರರನ್ನ ಸೇವೆಯಿಂದ ಅಮಾನತ್ತುಗೊಳಿಸಿ.!

ಮೆಡಿಕಲ್ ಕಾಲೇಜಿನ ಡೀನ್ ಬಿ.ವೈ.ಯುವರಾಜ್ರರನ್ನ ಸೇವೆಯಿಂದ ಅಮಾನತ್ತುಗೊಳಿಸಿ.!

 

ಚಿತ್ರದುರ್ಗ : ಬ್ರಹ್ಮಾಂಡ ಭ್ರಷ್ಟಾಚಾರವೆಸಗಿರುವ ಚಿತ್ರದುರ್ಗ ಮೆಡಿಕಲ್ ಕಾಲೇಜಿನ ಡೀನ್ ಬಿ.ವೈ.ಯುವರಾಜ್ರವರನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಬುಧವಾರ ಧರಣಿ ನಡೆಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪ್ರಭಾರೆ ಡೀನ್ ಆಗಿ ಅಧಿಕಾರ ಸ್ವೀಕರಿಸುವಾಗ ಮೂರು ಕೋಟಿ 84 ಲಕ್ಷದ 90 ಸಾವಿರ ರೂ.ಗಳಿತ್ತು. ಈ ಹಣದಲ್ಲಿ ಆಸ್ಪತ್ರೆಗೆ ಬೇಕಾಗುವ ಉಪಕರಣಗಳನ್ನು ಖರೀಧಿಸುವಲ್ಲಿ ಅವ್ಯವಹಾರವಾಗಿರುವುದನ್ನು ಕೂಲಂಕುಶ ತನಿಖೆ ನಡೆಸಬೇಕು. ಕೆಥೇಟರ್, ಎಕ್ಸರೆ ಫಿಲ್ಮ, ಟೇಬಲ್, ಕುರ್ಚಿ ಇನ್ನಿತರೆ ಸಾಮಾಗ್ರಿಗಳ ಖರೀಧಿಯಲ್ಲಿ ಹಗರಣವಾಗಿದೆ. ವೈದ್ಯಕೀಯ ಕಾಲೇಜು ಹಾಸ್ಟೆಲ್ ಪ್ರಾರಂಭಿಸುವಲ್ಲಿಯೂ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಮಾರುತಿ ಕ್ಯಾಟರಿಂಗ್ಗೆ ಹಾಸ್ಟೆಲ್ ನಡೆಸಲು ಅವಕಾಶ ನೀಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಕರಿರುವಾಗ ವೈದ್ಯಕೀಯ ಅಧೀಕ್ಷಕರು, ಡೆಪ್ಯೂಟಿ ವೈದ್ಯಕೀಯ ಅಧೀಕ್ಷಕರು ಹಾಗೂ ಆರ್.ಎಂ.ಓ. ಇವರುಗಳನ್ನು ಅನಗತ್ಯವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಕಾಲೇಜು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಹಲವು ಕೋಟಿ ರೂ.ಗಳ ವೈದ್ಯಕೀಯ ಉಪಕರಣಗಳು, ಡ್ರೆಸ್ ಇನ್ನಿತರೆ ಸಾಮಾಗ್ರಿಗಳನ್ನು ಖರೀಧಿಸಲಾಗಿದೆ. ಇ-ಟೆಂಡರ್ ಮೂಲಕ ಖರೀಧಿಸದೆ ಸರ್ಕಾರದ ಕೆ.ಪಿ.ಟಿ.ಟಿ. ನಿಯಮವನ್ನು ಮೀರಲಾಗಿದೆ. ಹಾಗಾಗಿ ಡೀನ್ ಬಿ.ವೈ.ಯುವರಾಜ್ರವರನ್ನು ಕೂಡಲೆ ಅಮಾನತ್ತುಗೊಳಿಸಿ ತನಿಖೆ ಕೈಗೊಳ್ಳುವಂತೆ ಧರಣಿಯ ನೇತೃತ್ವ ವಹಿಸಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ದೇವರಾಜ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಪ್ರಜಾ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಏಕಾಂತಪ್ಪ

ಜೈಭೀಮ್ ವಾರಿಯರ್ಸ್ ರಾಜ್ಯಾಧ್ಯಕ್ಷ ಹರೀಶ್, ವೆಂಕಟೇಶ್, ನಾಗೇಂದ್ರಪ್ಪ, ಡಿ.ವೆಂಕಟೇಶ್, ಜಿ.ನಿರಂಜನಮೂರ್ತಿ, ಆರ್.ಲಲಿತಮ್ಮ, ಎಸ್.ಉಮೇಶ್, ಪಾಪಯ್ಯ, ಸೋಮಣ್ಣ ಇನ್ನು ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೆಡಿಕಲ್ ಕಾಲೇಜಿನ ಡೀನ್ ಬಿ.ವೈ.ಯುವರಾಜ್ರರನ್ನ ಸೇವೆಯಿಂದ ಅಮಾನತ್ತುಗೊಳಿಸಿ.!ಗುಂಡಿ ಬಿದ್ದ ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಸಿಂಗಲ್ ಮ್ಯಾನ್ ಹೋರಾಟ..!ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸಿ ರೈತರ ತೋಟಗಳನ್ನು ಉಳಿಸಿ ಮನವಿ.!ಪಡಿತರ ಫಲಾನುಭವಿಗಳ ಇ-ಕೆವೈಸಿ ಮಾಡಿಸಲು ನವೆಂಬರ್ 30 ಕೊನೆಯ ದಿನ..!ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ.ತಾಮ್ರದ ಪಾತ್ರೆಯಲ್ಲಿ ಲವಂಗಗಳನ್ನು ಇಟ್ಟು ನೀವು ಬೇಡಿಕೊಂಡರೆ ನಿಮ್ಮ ಮನಸ್ಸಿನ ಇಷ್ಟಾರ್ಥಗಳೆಲ್ಲಾ ಕಾರ್ಯಸಿದ್ಧಿ ಆಗುತ್ತವೆ ಲವಂಗ ತಂತ್ರ!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 19-11-2026 ವಚನ. -ತುರುಗಾಹಿ ರಾಮಣ್ಣಜಾತಕಗಳ ಪ್ರಕಾರ ಯಾವ ಗ್ರಹಗತಿಗಳ ತಾಂತ್ರಿಕ ಶಕ್ತಿಯಿಂದ ಆರೋಗ್ಯ ಸಮಸ್ಯೆ ಮಾನಸಿಕ ಖಿನ್ನತೆ ಹೆಚ್ಚಾಗುತ್ತದೆ ತಿಳಿದುಕೊಳ್ಳಿ!ಬೆಳ್ಳಂಬೆಳಗ್ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ದಾಳಿ..!