ಚಿತ್ರದುರ್ಗ : ಮೆದೇಹಳ್ಳಿ ರಸ್ತೆಯಿಂದ ವೆಂಕಟೇಶ್ವರ ಟಾಕೀಸ್ ಕಡೆ ಹೋಗುವ ರಸ್ತೆ ತೀರಾ ಹದಗೆಟ್ಟಿದ್ದು, ಇನ್ನು ಒಂದು ತಿಂಗಳೊಳಗಾಗಿ ದುರಸ್ತಿಪಡಿಸುವಂತೆ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ರಸ್ತೆಯಲ್ಲಿಯೇ ಕುಳಿತು ಬುಧವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಎಸ್ಪಿ. ಕಚೇರಿ ಮುಂಭಾಗದಿಂದ ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ರವರ ನಿವಾಸದವರೆಗೆ ರಸ್ತೆ ತಗ್ಗು ಗುಂಡಿಗಳಿಂದ ಕೂಡಿದ್ದು, ಜಲ್ಲಿ ಕಲ್ಲುಗಳು ಮೇಲೆದ್ದಿವೆ. ರೀಜನಲ್ ಸ್ಕೂಲ್ ಮುಂಭಾಗ ಹಾಗೂ ಪ್ರಸನ್ನ ಟಾಕೀಸ್ ರಸ್ತೆ ಕೂಡ ಅದ್ವಾನವಾಗಿರುವುದರಿಂದ ದ್ವಿಚಕ್ರ ವಾಹನ ಸವಾರರು ಪಾದಚಾರಿಗಳು ಸಂಚರಿಸುವುದು ಕಷ್ಟವಾಗಿದೆ. ಜಿಲ್ಲಾಡಳಿತ, ನಗರಸಭೆ ಕೂಡಲೆ ಗಮನ ಹರಿಸಿ ಇಲ್ಲಿ ಸಿ.ಸಿ.ರಸ್ತೆಗಳನ್ನು ಮಾಡಿಸಬೇಕು. ಇಲ್ಲವಾದಲ್ಲಿ ರಸ್ತೆಯಲ್ಲೇ ತಿಂಡಿ ಊಟ ಸೇವಿಸಿ ಇಲ್ಲೇ ಮಲಗಬೇಕಾಗುತ್ತದೆಂದು ಗಣೇಶ್ ಎಚ್ಚರಿಸಿದ್ದಾರೆ.