LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಪ್ರೆವೆಂಟ್ ಶೋಯಿಂಗ್ ಬೆಳೆ ವಿಮೆ ತುರ್ತಾಗಿ ನೀಡುವಂತೆ ರೈತ ಸಂಘ ಒತ್ತಾಯ..!

ಪ್ರೆವೆಂಟ್ ಶೋಯಿಂಗ್ ಬೆಳೆ ವಿಮೆ ತುರ್ತಾಗಿ ನೀಡುವಂತೆ ರೈತ ಸಂಘ ಒತ್ತಾಯ..!

 

ಚಿತ್ರದುರ್ಗ : ಪ್ರೆವೆಂಟ್ ಶೋಯಿಂಗ್ ಬೆಳೆ ವಿಮೆ ತುರ್ತಾಗಿ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಬರಗಾಲ ಬೆಳೆ ಪರಿಹಾರ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಬೆಳೆ ವಿಮೆ ಪಾವತಿಯಲ್ಲಿ ಬಹಳಷ್ಟು ತಾರತಮ್ಯವಾಗಿರುವುದರಿಂದ ಜಿಲ್ಲಾಡಳಿತ ಕೂಡಲೆ ಕುಂದು ಕೊರತೆ ಸಭೆ ಕರೆದು ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು. ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಬರಗಾಲವಿದೆ. ಬಿತ್ತನೆಯಾಗದಿರುವುದರಿಂದ ಬೆಳೆ ವಿಮೆ ಪಾವತಿಸಿರುವ ಪ್ರೆವೆಂಟ್ ಶೋಯಿಂಗ್ ಬೆಳೆ ವಿಮೆ ಕೊಡುವುದಾಗಿ ನಾಲ್ಕೈದು ತಿಂಗಳ ಹಿಂದೆ ಸಭೆ ನಡೆಸಿ ಶೇ.25 ಪರ್ಸೆಂಟ್ ಪಾವತಿಸುವುದಾಗಿ ಭರವಸೆ ನೀಡಿದ್ದರೂ ಇದುವರೆವಿಗೂ ಯಾವ ರೈತನಿಗೂ ಬೆಳೆ ವಿಮೆ ಹಣ ಜಮಾ ಆಗಿರುವುದಿಲ್ಲ. ಬರಗಾಲ ಘೋಷಣೆಯಾಗಿ ಐದಾರು ತಿಂಗಳು ಕಳೆದಿದ್ದರೂ ಬರ ಪರಿಹಾರ ಹಣ ಪಾವತಿಯಾಗಿಲ್ಲ. ಎಕರೆಗೆ ಕೇವಲ

ಎರಡುವರೆ ಸಾವಿರ ಮತ್ತು ಐದು ಸಾವಿರ ರೂ.ಗಳೆಂದು ಸರ್ಕಾರ ಹೇಳುತ್ತಿದೆ. ಇಷ್ಟು ಪರಿಹಾರ ನೀಡಿದರೆ ರೈತರಿಗೆ ನಷ್ಟವಾಗುತ್ತದೆ. ಕನಿಷ್ಟ ಒಂದು ಎಕರೆಗೆ 25 ಸಾವಿರ ರೂ. ಪರಿಹಾರ ಕೊಡಬೇಕೆಂದು ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.

ತೋಟಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ಗಳ ಮೂಲಕ ನೀರು ಉಣಿಸುತ್ತಿದ್ದಾರೆ. ಅಡಿಕೆ ಫಸಲಿಲ್ಲದೆ ರೈತರು ನಷ್ಟದಲ್ಲಿದ್ದಾರೆ. ಅಡಿಕೆ ದಾಳಿಂಬೆ ಬೆಳೆಗಳಿಗೆ

2024-25 ನೇ ಸಾಲಿನ ಬೆಳೆ ವಿಮೆ ಪಾವತಿಯಾಗಿದೆ. ಬೆಳೆ ವಿಮೆ ಕಂಪನಿಯ ಮಾಲೀಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ರೈತ ಮುಖಂಡರುಗಳೊಂದಿಗೆ ಸಭೆ ಕರೆದು ಚರ್ಚಿಸಿ ಬೆಳೆ ವಿಮೆ ಕಂಪನಿಗಳಿಂದ ಹೆಚ್ಚಿನ ಪರಿಹಾರ ಕೊಡಿಸುವಂತೆ ರೈತರು ಆಗ್ರಹಿಸಿದರು.

ರೆಡ್ಡಿಹಳ್ಳಿ ವೀರಣ್ಣ, ಚಿಕ್ಕಬ್ಬಿಗೆರೆ ನಾಗರಾಜ್, ಕೆ.ಟಿ.ತಿಪ್ಪೇಸ್ವಾಮಿ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಕಾಂತರಾಜ್, ಸಿದ್ದರಾಮಣ್ಣ, ತಿಮ್ಮಣ್ಣ, ಮಲ್ಲಿಕಾರ್ಜುನ್, ಕೊಟ್ರಬಸಪ್ಪ

ತಿಪ್ಪೇಸ್ವಾಮಿ, ಮಾರುತಿ, ಸದಾಶಿವ, ಸಿದ್ದಣ್ಣ, ರಾಮರೆಡ್ಡಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಾತಕಗಳ ಪ್ರಕಾರ ಯಾವ ಗ್ರಹಗತಿಗಳ ತಾಂತ್ರಿಕ ಶಕ್ತಿಯಿಂದ ಆರೋಗ್ಯ ಸಮಸ್ಯೆ ಮಾನಸಿಕ ಖಿನ್ನತೆ ಹೆಚ್ಚಾಗುತ್ತದೆ ತಿಳಿದುಕೊಳ್ಳಿ!ಬೆಳ್ಳಂಬೆಳಗ್ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ದಾಳಿ..!ಐಪಿಎಲ್‌ನಿಂದ ಧೋನಿ ನಿವೃತ್ತಿ ಘೋಷಿಸಿದ್ದಾರೆ.!ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಕೆಪಿಎಸ್‌ಸಿ ಸದಸ್ಯೆ ಬಿ.ವಿ. ಗೀತಾ ಶಿವಮೂರ್ತಿ ಕಸ್ಟಡಿ..!ಪ್ರೆವೆಂಟ್ ಶೋಯಿಂಗ್ ಬೆಳೆ ವಿಮೆ ತುರ್ತಾಗಿ ನೀಡುವಂತೆ ರೈತ ಸಂಘ ಒತ್ತಾಯ..!ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆಎಸ್.ಟಿ ಯುವಕರಿಗೆ ಸೋಲಾರ್ ಪಿವಿ ತರಬೇತಿಗೆ ಅರ್ಜಿ ಆಹ್ವಾನ18-11-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ-ಸತ್ಯಕ್ಕ  ಅವರ ವಚನ.ವಾಮಾಚಾರಕ್ಕೆ ಮಾಟ ಮಂತ್ರ ದೂಷಕ್ಕೆ ಶತ್ರು ದೃಷ್ಟಿಗೆ ಜನ ದೃಷ್ಟಿಗೆ ದೃಷ್ಟಿಯಿಂದ ಈ ಶಕ್ತಿಶಾಲಿ ಯಂತ್ರವನ್ನು ಧಾರಣೆ ಮಾಡಿ!