ಚಿತ್ರದುರ್ಗ : ನವರಾತ್ರಿಯ ಏಳನೆ ದಿನವಾದ ಶನಿವಾರ ಅಂಭಾ ಭವಾನಿ ದೇವಸ್ಥಾನದಲ್ಲಿ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು.
ಒಂಬತ್ತು ದಿನಗಳ ಕಾಲ ನಡೆಯುವ ಶರನ್ನವರಾತ್ರಿ ಪ್ರಯುಕ್ತಿ ಅಂಭಾ ಭವಾನಿಗೆ ಬಣ್ಣ ಬಣ್ಣದ ಹೂವು ಹಾರಗಳಿಂದ ಸಿಂಗರಿಸಿ ಪೂಜಿಸಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.
ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುರೇಶ್ರಾವ್ ಜಾದವ್, ಕಾರ್ಯದರ್ಶಿ ಜೆ.ಗೋಪಾಲರಾವ್ಜಾದವ್, ಜೀಜಾಮಾತ ಮಹಿಳಾ ಮಂಡಳಿ ಅಧ್ಯಕ್ಷೆ ಉಷಾಬಾಯಿ ಇವರುಗಳು ನವರಾತ್ರಿಯ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.