LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಮೈಸೂರು ದಸರಾ: ಜಂಬೂ ಸವಾರಿಯಲ್ಲಿ ಮಿಂಚಲಿರುವ ಚಿತ್ರದುರ್ಗದ ‘ಖಾಸ ಬೇಡರ ಪಡೆ’

ಮೈಸೂರು ದಸರಾ: ಜಂಬೂ ಸವಾರಿಯಲ್ಲಿ ಮಿಂಚಲಿರುವ ಚಿತ್ರದುರ್ಗದ ‘ಖಾಸ ಬೇಡರ ಪಡೆ’

 

ಚಿತ್ರದುರ್ಗ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯನ್ನು ಪ್ರತಿನಿಧಿಸಿ ‘ಖಾಸ ಬೇಡರ ಪಡೆ’ ಜಾನಪದ ಕಲಾತಂಡ ಭಾಗವಹಿಸಲಿದೆ.

ಈ ಕಲಾತಂಡವನ್ನು ತಿಪ್ಪೇಸ್ವಾಮಿ ಚಲ್ಲೂರು ಅವರು ಮುನ್ನಡೆಸುತ್ತಿದ್ದು, ಸಾಂಪ್ರದಾಯಿಕ ಕಲೆಯ ವೈಭವವನ್ನು ಜಂಬೂ ಸವಾರಿಯಲ್ಲಿ ಅನಾವರಣಗೊಳಿಸಲು ಸಜ್ಜಾಗಿದೆ.

ಈ ಕುರಿತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಿ.ಎಂ. ಗುರುನಾಥ ಮಾತನಾಡಿ, ಈ ಹಿಂದೆ ಜಂಬೂ ಸವಾರಿಗೆ ಕೇವಲ 10 ರಿಂದ 20 ಜನರ ಸಣ್ಣ ತಂಡಗಳನ್ನು ಕಳುಹಿಸಲಾಗುತ್ತಿತ್ತು. ಆದರೆ ಈ ಬಾರಿ ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರ ವಿಶೇಷ ಒತ್ತಾಸೆ ಮತ್ತು ಆಸಕ್ತಿಯಿಂದಾಗಿ, ರಾಜ್ಯಾದ್ಯಂತ ಪ್ರತಿ ತಂಡದಲ್ಲೂ ಕನಿಷ್ಠ 40 ಜನರ ದೊಡ್ಡ ಗುಂಪು ಭಾಗವಹಿಸುವಂತೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಭಾಗವಹಿಸುತ್ತಿರುವ ಕಲಾವಿದರಿಗೆ ವಿಶೇಷ ಮೆರಗು ನೀಡಲು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಹೊಸ ಸಾಂಪ್ರದಾಯಿಕ ಉಡುಪುಗಳು ಹಾಗೂ ಕಲಾತಂಡಕ್ಕೆ ಅಗತ್ಯವಿರುವ ಪರಿಕರಗಳನ್ನು ಒದಗಿಸಲಾಗಿದೆ. ನಮ್ಮ ಜಿಲ್ಲೆಯ ಸಾಂಸ್ಕøತಿಕ ವೈಭವವು ಜಂಬೂ ಸವಾರಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಮೂಡಿಬರಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮೆರವಣಿಗೆಯಲ್ಲಿ ಜಿಲ್ಲೆಯ ಕಲಾ ವೈಭವವನ್ನು ಸಾರಲು ತೆರಳಿರುವ ತಂಡಕ್ಕೆ ಜಿಲ್ಲಾಧಿಕಾರಿ ಎಸ್.ರಮ್ಯಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಬೆಂಗಳೂರು ವಿಭಾಗೀಯ ಜಂಟಿ ನಿರ್ದೇಶಕ ಅಶೋಕ ಎನ್. ಚಲವಾದಿ ಹಾಗೂ ಚಿತ್ರದುರ್ಗ ಸಹಾಯಕ ನಿರ್ದೇಶಕ ಡಾ. ಬಿ.ಎಂ. ಗುರುನಾಥ ಅವರು ಶುಭ ಹಾರೈಸಿದ್ದಾರೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST