ಮುಂಬೈ: ಅಮಿತಾಭ್ ಬಚ್ಚನ್ ಅವರ ಮುಂಬೈನ ಜುಹುನಲ್ಲಿರುವ 'ಜಲ್ಸಾ' ಬಂಗಲೆಯ ಮಾಲೀಕತ್ವದ ವಿಚಾರ ಕುಟುಂಬದಲ್ಲಿ ವಿವಾದಕ್ಕೆ ಕಾರಣವಾಗಿದೆ.
1993ರಲ್ಲಿ ಜಯಾ ಬಚ್ಚನ್ ಹೆಸರಿಗೆ ಉಡುಗೊರೆ ಪತ್ರದ ಮೂಲಕ ಆಸ್ತಿ ವರ್ಗಾಯಿಸಿರುವುದನ್ನು ಅಮಿತಾಭ್ ಅವರ ಸಹೋದರನ ಪತ್ನಿ ರಮೋಲಾ ಬಚ್ಚನ್ ಪ್ರಶ್ನಿಸಿದ್ದಾರೆ.
ತಮ್ಮ ಒಪ್ಪಿಗೆಯಿಲ್ಲದೆ ಆಸ್ತಿ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಕಳೆದ 7 ತಿಂಗಳಲ್ಲಿ ಹಲವು ದೂರು ನೀಡಿದ್ದಾರೆ. ಈ ಸಂಬಂಧ ಮುಂಬೈನ ನೋಂದಣಿ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ.