LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಸೋಲನ್ನು ಹಿಮ್ಮೆಟ್ಟಿಸುವ ಗುಣ ಕ್ರೀಡೆಯಿಂದ ಮಾತ್ರ ಸಾಧ್ಯ: ಡಾ.ಮೋಹನ್ಕುಮಾರ್

ಸೋಲನ್ನು ಹಿಮ್ಮೆಟ್ಟಿಸುವ ಗುಣ ಕ್ರೀಡೆಯಿಂದ ಮಾತ್ರ ಸಾಧ್ಯ: ಡಾ.ಮೋಹನ್ಕುಮಾರ್

 

ಚಿತ್ರದುರ್ಗ : ಸೋಲನ್ನು ಹಿಮ್ಮೆಟ್ಟಿಸುವ ಗುಣ ಕ್ರೀಡೆಯಿಂದ ಮಾತ್ರ ಬೆಳೆಯಲು ಸಾಧ್ಯ ಎಂದು ಚಿತ್ರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಮೋಹನ್ಕುಮಾರ್ ತಿಳಿಸಿದರು.

ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವ ವಿದ್ಯಾನಿಲಯ, ಮತ್ತು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ, ಚಿತ್ರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರು ಹದಿನೈದನೆ ಅಥ್ಲೆಟಿಕ್ಸ್ ಕ್ರೀಡಾಕೂಟ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯದ ತಂಡದ ಆಯ್ಕೆ ಸಮಾರೋಪ ಸಮಾರಂಭದಲ್ಲಿ ಜಯಶಾಲಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಕ್ರೀಡಾಪಟುಗಳಿಗೆ ಸೂಕ್ತ ಪ್ರೋತ್ಸಾಹ ಮಾರ್ಗದರ್ಶನ ಬೇಕು. ಕ್ರೀಡಾ ಯಶಸ್ಸಿಗೆ ದುಡಿಯುವುದು ಸುಲಭವಲ್ಲ. ದೈಹಿಕ ಶಿಕ್ಷಕರು, ನಿರ್ದೇಶಕರು, ಕಾಲೇಜು ಸಿಬ್ಬಂದಿಗಳು ಹಾಗೂ ಕ್ರೀಡಾಪುಟುಗಳು ಹೀಗೆ ಪ್ರತಿಯೊಬ್ಬರ ಪರಿಶ್ರಮವಿರುತ್ತದೆ. ಎಲ್ಲಿಯೂ ಲೋಪವಾಗದಂತೆ ಮೂರು ದಿನಗಳ ಕಾಲ ಕ್ರೀಡೆ ನಡೆಯಿತು. ಕ್ರೀಡೆ ಕ್ರೀಡಾಪಟುಗಳಿಂದ ಮಾತ್ರ ಬೆಳೆಯಲು ಸಾಧ್ಯ. ಕ್ರೀಡೆ ಪಠ್ಯಕ್ಕೆ ಪೂರಕವಾಗಿ ಹೊರಹೊಮ್ಮಲಿ ಎಂದು ಆಶಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ ಶಿಕ್ಷಣ ಶಾಲೆಯಲ್ಲಿ ನಾಲ್ಕು ಗೋಡೆಗಳ ನಡುವೆ ಜ್ಞಾನ ಕೊಡಬಹುದು. ಆದರೆ ಕ್ರೀಡೆಯಲ್ಲಿ ಧೈರ್ಯ, ಸಾಹಸ, ಸಂಯಮ, ತಾಳ್ಮೆ, ಸಹಕಾರ, ಮನೋಭಾವನೆ, ಮೂಡುತ್ತದೆ. ಎಲ್ಲರನ್ನು ಒಂದು ಕಡೆ ಸೇರಿಸುವ ಶಕ್ತಿ ಕ್ರೀಡೆಗಿದೆ. ಮೂರು ದಿನಗಳ ಕಾಲ ನಡೆದ ಕ್ರೀಡೆಯಲ್ಲಿ ತೀರ್ಪುಗಾರರು ಪಾರದರ್ಶಕವಾಗಿ ತೀರ್ಪು ನೀಡಿದ್ದಾರೆ. ಕ್ರೀಡಾಪಟುಗಳಿಗೆ ಇನ್ಸೂರೆನ್ಸ್ ಸೌಲಭ್ಯವಿದೆ. ಪ್ರತಿ ವರ್ಷ ಐವತ್ತು ಕ್ರೀಡಾಪಟುಗಳಿಗೆ ಸ್ಕಾಲರ್ಶಿಪ್ ನೀಡಲಾಗುತ್ತದೆ. ಇಪ್ಪತ್ತು ವರ್ಷಗಳಿಂದಲೂ ಶಾಲಾ-ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರು ಮತ್ತು ನಿರ್ದೇಶಕರುಗಳನ್ನು ನೇಮಕ ಮಾಡಿಲ್ಲದಿರುವುದು ಕ್ರೀಡೆಗೆ ಹಿನ್ನೆಡೆಯಾಗಿದೆ. ಸರ್ಕಾರ ಕೂಡಲೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಷ್ಕರ ನಡೆಸಲಾಗುವುದೆಂದು ಎಚ್ಚರಿಸಿದರು.

ಸರ್ಕಾರಿ ನೌಕರಿಯಲ್ಲಿ ಉತ್ತಮ ಕ್ರೀಡಾಪಟುಗಳಿಗೆ ಶೇ.3 ರಷ್ಟು ಮೀಸಲಾತಿಯಿದೆ. ಸೋಲೆ ಗೆಲುವಿನ ಮೆಟ್ಟಿಲು. ಸೋತವರು ಕುಗ್ಗಬೇಡಿ, ಗೆದ್ದವರು ಬೀಗಬೇಡಿ ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.

ಡಾ.ಗಂಗಾಧರ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ದೈಹಿಕ ಶಿಕ್ಷಣ ನಿರ್ದೇಶಕ ಡಾ.ವೀರೇಂದ್ರ ಕೆ.ಎಂ, ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ಮಂಜುನಾಥ, ಪ್ರೊ.ರಮ್ಯ, ಸಹಾಯಕ ಪ್ರಾಧ್ಯಾಪಕ ಮಂಜುನಾಥನಾಯ್ಕ, ರಾಘವೇಂದ್ರ, ಶ್ರೀನಿವಾಸ್ ಜೆ ಇವರುಗಳು ವೇದಿಕೆಯಲ್ಲಿದ್ದರು.

 

ಚಿತ್ರದುರ್ಗ : ಮೂರು ದಿನಗಳ ಕಾಲ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಹದಿನೈದನೆ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದಲ್ಲಿ ಚಿತ್ರದುರ್ಗದ ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿತು.

ಮಹಿಳಾ ವಿಭಾಗದಲ್ಲಿ ಹರಿಹರದ ಗಿರಿಯಮ್ಮ ಮಹಿಳಾ ಪ್ರಥಮ ದರ್ಜೆ ಕಾಲೇಜು ಚಾಂಪಿಯನ್ಶಿಪ್ನ್ನು ತನ್ನದಾಗಿಸಿಕೊಂಡರೆ ಸಮಗ್ರ ಪ್ರಶಸ್ತಿಯನ್ನು ಚಳ್ಳಕೆರೆ ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ಮುಡಿಗೇರಿಸಿಕೊಂಡಿತು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST