ದಾವಣಗೆರೆ: ಪಂಚಮಸಾಲಿ ಮಠದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಮಠದ ಆಸ್ತಿ ಕಾಪಾಡುವ ಹಿತದೃಷ್ಠಿಯಿಂದ ಹಾಗೂ ಶಾಂತಿಯನ್ನು ಮುಂದುವರೆಸುವ ಸಲುವಾಗಿ ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಶ್ರೀ ಪಂಚಮಸಾಲಿ ಮಠದ ಆವರಣದಲ್ಲಿ ಅಕ್ಟೋಬರ್ 31 ರವರೆಗೆ ಧಾರ್ಮಿಕ ಪೂಜಾ ವಿಧಾನಗಳನ್ನು ಹೊರತುಪಡಿಸಿ ಯಾವುದೇ ರೀತಿಯ ಸಭೆ/ಸಮಾರಂಭ ಹಾಗೂ ಪತ್ರಿಕಾ ಗೋಷ್ಠಿಯನ್ನು ನಡೆಸದಂತೆ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಆದೇಶಿಸಿದ್ದಾರೆ.