LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಎಲ್ಲಾ ಸಮುದಾಯದವರನ್ನು ಒಳಗೊಂಡ ಮದಕರಿನಾಯಕ ಜಯಂತ್ಯೋತ್ಸವ.!

ಎಲ್ಲಾ ಸಮುದಾಯದವರನ್ನು ಒಳಗೊಂಡ ಮದಕರಿನಾಯಕ ಜಯಂತ್ಯೋತ್ಸವ.!

 

ಚಿತ್ರದುರ್ಗ : ನಾಡ ದೊರೆ ರಾಜಾವೀರ ಮದಕರಿನಾಯಕನನ್ನು ಕೇವಲ ನಾಯಕ ಜನಾಂಗಕ್ಕೆ ಸೀಮಿತಗೊಳಿಸಲಾಗಿತ್ತು. ಆದರೆ ಈಗ ಎಲ್ಲಾ ಜಾತಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮದಕರಿನಾಯಕ ಜಯಂತ್ಯೋತ್ಸವಕ್ಕೆ ಮುಂದಾಗಿರುವುದು ಅತ್ಯಂತ ಖುಷಿಯ ವಿಚಾರ ಎಂದು ಎಸ್.ಆರ್.ಎಸ್.ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ಸಂತಸ ವ್ಯಕ್ತಪಡಿಸಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಕರೆಯಲಾಗಿದ್ದ ಎಲ್ಲಾ ಜಾತಿ ಜನಾಂಗದ ಸಮಾನ ಮನಸ್ಕರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತ ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ಆಳಿದ ಮದಕರಿನಾಯಕ ಜಯಂತಿಯನ್ನು ಎಲ್ಲಾ ಜಾತಿ ಜನಾಂಗದವರು ಕೂಡಿಕೊಂಡು ವಿಜೃಂಭಣೆಯಿಂದ ಆಚರಿಸಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ಕೊಡುವುದಾಗಿ ಭರವಸೆ ನೀಡಿದರು.

ಕುರುಬ ಸಮಾಜದ ಮುಖಂಡ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ ಮಾತನಾಡಿ ನಾಡ ದೊರೆ ಮದಕರಿನಾಯಕ ಜಯಂತಿ ವೈಭವೋಪೇತವಾಗಿ ನಡೆಯಬೇಕು. ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸಿ ಪೂರ್ಣಕುಂಭಕ್ಕೆ ಅವಕಾಶ ಮಾಡಿಕೊಡಬೇಕು. ಬರಗೇರಮ್ಮ, ಉಚ್ಚಂಗಿಯಲ್ಲಮ್ಮ, ಏಕನಾಥೇಶ್ವರಿ ದೇವತೆಗಳನ್ನು ಜಯಂತಿಯಲ್ಲಿ ಬರಮಾಡಿಕೊಂಡರೆ ಜಯಂತಿಗೆ ಕಳೆ ಕಟ್ಟುತ್ತದೆ. ರಕ್ತದಾನ ಶಿಬಿರ ಹಾಗೂ ಮಕ್ಕಳಿಗೆ ನೋಟ್ಬುಕ್ಗಳ ವಿತರಣೆ ಸೇರಿದಂತೆ ಇನ್ನಿತರೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.

ವೀರಶೈವ ಸಮಾಜದ ಜಿತೇಂದ್ರ ಮಾತನಾಡುತ್ತ ಮದಕರಿನಾಯಕನ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸಬೇಕಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಂತಿಯಲ್ಲಿ ಪಾಲ್ಗೊಳ್ಳುವಂತೆ ಕ್ರಮ ವಹಿಸಬೇಕು. ಮದಕರಿನಾಯಕ ಎಲ್ಲರ ಸ್ವತ್ತು. ಕೇವಲ ನಾಯಕ ಜನಾಂಗಕ್ಕೆ ಸೀಮಿತಗೊಳಿಸಬಾರದೆಂದು ಹೇಳಿದರು.

ಉಪ್ಪಾರ ಸಮಾಜದ ನಿಕಟ ಪೂರ್ವ ಅಧ್ಯಕ್ಷ ಆರ್.ಮೂರ್ತಿ ಮಾತನಾಡಿ ನಮ್ಮ ಸಮಾಜದವರ ಜೊತೆ ಸಭೆ ನಡೆಸಿ ಮದಕರಿನಾಯಕ ಜಯಂತಿಗೆ ಬೇಕಾದ ಸಹಕಾರ ಕೊಡುತ್ತೇನೆಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್ ಮಾತನಾಡುತ್ತ ನಾಡ ದೊರೆ ರಾಜಾವೀರ ಮದಕರಿನಾಯಕನನ್ನು ನಾಯಕ ಜನಾಂಗಕ್ಕಷ್ಟೆ ಅಲ್ಲ. ಇಡಿ ಮನು ಕುಲಕ್ಕೆ ಬೇಕಾದಂತ ಮಹಾನ್ ಪುರುಷ. ಏಳು ದಿನಗಳ ಕಾಲ ಜಯಂತಿಯನ್ನು ಸಡಗರ ಸಂಭ್ರಮಗಳಿಂದ ಆಚರಿಸಬೇಕು. ಅದಕ್ಕೆ ಬೇಕಾದ ಸಹಕಾರ ನೀಡುತ್ತೇನೆಂದರು.

ಬಾಳೆಕಾಯಿ ಶ್ರೀನಿವಾಸ್ ಮಾತನಾಡಿ ಸಮಾನ ಮನಸ್ಕರೆಲ್ಲಾ ಸೇರಿ ಮದಕರಿನಾಯಕ ಜಯಂತಿ ಆಚರಿಸಲು ಹೊರಟಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನ್ಯಾಯವಾದಿ ಉಮೇಶ್ ಮಾತನಾಡುತ್ತ ರಾಜಾವೀರ ಮದಕರಿನಾಯಕ ಜಯಂತಿಗೆ ತನು, ಮನ, ಧನ ನೀಡಿ ಕೈಜೋಡಿಸುತ್ತೇನೆಂದರು.

ದಲಿತ ಮುಖಂಡ ಕುಂಚಿಗನಹಾಳ್ ಮಹಲಿಂಗಪ್ಪ ಮಾತನಾಡಿ ಮಹನೀಯರ ಜಯಂತಿಗಳನ್ನು ಎಲ್ಲಾ ಜಾತಿ ಜನಾಂಗದವರು ಸೇರಿ ಆಚರಿಸಿದರೆ ಅದೊಂದು ಶೋಭೆಯೆನಿಸುತ್ತದೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆಸುವ ವ್ಯವಸ್ಥೆ ಮಾಡಿ ಎಂದರು.

ನಗರಸಭೆ ಮಾಜಿ ಸದಸ್ಯ ವೆಂಕಟೇಶ್ ಮಾತನಾಡುತ್ತ ಇಡಿ ಚಿತ್ರದುರ್ಗವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಮದಕರಿನಾಯಕ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸೋಣ. ಏಳು ದಿನಗಳ ಕಾಲ ವಿವಿಧ ಬಗೆಯ ಸಾಂಸ್ಕøತಿಕ ಹಾಗೂ ಮನೋರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದು ತಿಳಿಸಿದರು.

ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮದಕರಿನಾಯಕನ ಹೆಸರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬೇಕಾದರೆ ಜಯಂತಿಯನ್ನು ವೈಭವೋಪೇತವಾಗಿ ಆಚರಿಸೋಣ. ಮದಕರಿನಾಯಕನ ಇತಿಹಾಸವುಳ್ಳ ಪುಸ್ತಕವನ್ನು ಮುಂದಿನ ದಿನಗಳಲ್ಲಿ ಹೊರ ತಂದು ಶಾಲಾ-ಕಾಲೇಜು ಮಕ್ಕಳಿಗೆ ಮದಕರಿನಾಯಕನ ಇತಿಹಾಸವನ್ನು ಪರಿಚಯಿಸೋಣ. ಕೆಂಪೇಗೌಡ ಜಯಂತಿಯನ್ನು ಮೀರಿಸುವ ರೀತಿಯಲ್ಲಿ ಮದಕರಿನಾಯಕ ಜಯಂತಿ ಆಚರಿಸಬೇಕಾದರೆ ಎಲ್ಲಾ ಜಾತಿ ಜನಾಂದವರ ಸಹಕಾರ ಮುಖ್ಯ ಎಂದು ಕೋರಿದರು.

ಭೋವಿ ಸಮಾಜದ ಮುಖಂಡ ಆನಂದಪ್ಪ ಮಾತನಾಡುತ್ತ ಕೇವಲ ನಾಯಕ ಜನಾಂಗದವರಷ್ಟೆ ಮದಕರಿನಾಯಕ ಜಯಂತಿಯನ್ನು ಆಚರಿಸಿದರೆ ಸಾಲದು. ಎಲ್ಲಾ ಜನಾಂಗದವರನ್ನು ಜೊತೆಯಲ್ಲಿ ಕರೆದುಕೊಂಡು ಆಚರಿಸಿದರೆ ಅದಕ್ಕೊಂದು ಗೌರವ ಸಿಗುತ್ತದೆಂದು ನುಡಿದರು.

ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ವೀರೇಂದ್ರ ರೈತ ಮುಖಂಡ ಲಕ್ಷ್ಮಿಕಾಂತ್ ಇವರುಗಳು ಮದಕರಿನಾಯಕ ಜಯಂತಿ ಆಚರಿಸುವ ಕುರಿತು ಮಾತನಾಡಿದರು.

ನಾಯಕ ಸಮಾಜದ ಮುಖಂಡರುಗಳಾದ ಮಂಜುನಾಥ್, ಶ್ರೀನಿವಾಸ್ನಾಯಕ, ರಾಜಾ ಮದಕರಿನಾಯಕ, ರಾಜಣ್ಣ ಲಕ್ಷ್ಮಿಸಾಗರ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಮ್ಮ ಮಕ್ಕಳು ತುಂಬಾ ಮಂಕು ಇದ್ರೆ ಓದಲ್ಲ ಮತ್ತು ಹೇಳಿದ ಮಾತು ಕೇಳೋದಿಲ್ಲ ಅಂದರೆ ಹೀಗೆ ಮಾಡಿರಿ..!?ಸಣ್ಣ ಮತ್ತು ಅತಿಸಣ್ಣ ರೈತರಿಗೆ ಗುಡ್ ನ್ಯೂಸ್.! ಇಲ್ಲಿದೆ ಮಾಹಿತಿ.!ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ:ದಾವಣಗೆರೆ ವಿಶ್ವವಿದ್ಯಾನಿಲಯದಿಂದ MBA ಖಾಲಿ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನಶ್ರೀ ಪಂಚಮಶಾಲಿ ಮಠದಲ್ಲಿ ಅಕ್ಟೋಬರ್‌ 31 ರವರೆಗೆ ನಿಷೇದಾಜ್ಞೆ ಜಾರಿ.!ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ಅ.31 ರವರೆಗೆ ವಿಸ್ತರಣೆನಾಗಪುರ ದೀಕ್ಷಾಭೂಮಿ ಯಾತ್ರೆ: ಅರ್ಜಿ ಆಹ್ವಾನಎಲ್ಲಾ ಸಮುದಾಯದವರನ್ನು ಒಳಗೊಂಡ ಮದಕರಿನಾಯಕ ಜಯಂತ್ಯೋತ್ಸವ.!ಹಳಿಯೂರು ಗ್ರಾಮದ ನಿವಾಸಿ ರವಿಚಂದ್ರ ಕೆ.  ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಸೂರ್ಯಕಾಂತಿ ಖರೀಧಿ ಕೇಂದ್ರ ತೆರೆಯುವಂತೆ ಒತ್ತಾಯ.!