LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಜನ-ಜಾನುವಾರುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಹೋಳಿಗೆಮ್ಮ .!

ಜನ-ಜಾನುವಾರುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಹೋಳಿಗೆಮ್ಮ .!

 

 ಚಿತ್ರದುರ್ಗ: ಉತ್ತಮ ಮಳೆ, ಬೆಳೆ ಮತ್ತು ಜನ-ಜಾನುವಾರುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ ಜನತೆ 'ಹೋಳಿಗೆಮ್ಮ' ಹಬ್ಬವನ್ನು ಆಚರಿಸಿ, ಊರಮ್ಮಳನ್ನು ತೃಪ್ತಿಪಡಿಸಿದ್ದಾರೆ.

 ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಮೊದಲನೇ ತಿರುವಿನಲ್ಲಿನ ಅಂಜನೇಯ ದೇವಾಲಯದ ಬಳಿ ಪ್ರತಿ ವರ್ಷದಂತೆ ಸಾರಿಯೂ ಸಹಾ ಹೋಳಿಗೆಮ್ಮನನ್ನು ಆಚರಣೆ ಮಾಡಲಾಯಿತು ಇದು ವಿಶಿಷ್ಟವಾದ ಆಚರಣೆ. ಸಂಪ್ರದಾಯ. ಹಬ್ಬದ ಆಚರಣೆಯಿಂದಾಗಿಯೇ ತಾಲೂಕಿನಲ್ಲಿ ಯಾವುದೇ ಭೀಕರ ರೋಗ-ರುಜಿನಗಳು, ಪ್ರಕೃತಿ ವಿಕೋಪಗಳು ನಡೆಯುತ್ತಿಲ್ಲ. ಕಾರಣ ನಾವೆಲ್ಲರೂ ಜಾತ್ಯತೀತರಾಗಿ ಹಬ್ಬವನ್ನು ಆಚರಿಸುತ್ತೇವೆ ಎನ್ನುತ್ತಾರೆ ಇಲ್ಲಿಯ ಹೆಂಗಳೆಯರು.

 ಗೃಹಿಣಿಯರು ಶ್ರದ್ಧೆ, ಭಕ್ತಿ ಮತ್ತು ಮಡಿವಂತಿಕೆಯಿಂದ ಹೂರಣ ಮಾಡಿ, ಹೋಳಿಗೆ ಬೇಯಿಸಿ, ನಾನಾ ರೀತಿ ಅಡುಗೆಗಳನ್ನು ಸಿದ್ಧಪಡಿಸುತ್ತಾರೆ. ನಂತರ ಮಡಿಕೆಯಲ್ಲಿ ಅವುಗಳೆಲ್ಲವನ್ನೂ ಬೇವಿನ ಎಲೆಯ ಜೊತೆಯಲ್ಲಿ ಇರಿಸಿ, ಪೂಜೆ ಮಾಡುತ್ತಾರೆ. ನಗರದ ಹೊಳಲ್ಕೆರೆ ರಸ್ತೆಯ ಮೊದಲನೇ ತಿರುವಿನಲ್ಲಿನ ಅಂಜನೇಯ ದೇವಾಲಯದ ಬಳಿ ನಿರ್ಮಾಣ ಮಾಡಿದ ಅಮ್ಮನ ಪ್ರತಿಮೆ ಮುಂದೆ ಮಡಿಕೆಯನ್ನು ಇರಿಸಿ, ದೇವಿಗೆ ನಮಸ್ಕಾರ ಮಾಡಿ, ಪ್ರಾರ್ಥನೆ ಸಲ್ಲಿಸಿ, ನೈವೇದ್ಯ ಮಾಡುವುದು ವಾಡಿಕೆ. ಆಚರಣೆಯ ಹಿನ್ನೆಲೆ-ಇತಿಹಾಸ ಇಲ್ಲಿನ ಜನರಿಗೆ ತಿಳಿದಿಲ್ಲ. ಆದರೂ ಹಬ್ಬದ ಆಚರಣೆ ತಪ್ಪಿಲ್ಲ, ಯಾರೂ ಕೈ ಬಿಟ್ಟಿಲ್ಲ. ಪ್ರತೀ ವರ್ಷ ತಪ್ಪದೇ ನಿಗದಿತ ದಿನದಂದು, ನಕ್ಷತ್ರ-ತಿಥಿ ಆಧರಿಸಿ ಆಚರಣೆ ಆಗುತ್ತಿದೆ. ಜು 28 ಇಂದು ಮಂಗಳವಾರ ಹೋಳಿಗೆಯಮ್ಮ ಹಬ್ಬವನ್ನು ಅದ್ಧೂರಿಯಾಗಿ ಮನೆ ಮನೆಯಲ್ಲೂ ಆಚರಣೆ ಮಾಡಿದ್ದಾರೆ.

  ಆಚರಣೆಯನ್ನು ನಮ್ಮ ತಾತ ನಂತರ ನಮ್ಮ ತಂದೆಯವರು ಆಚರಿಸಿಕೊಂಡು ಬಂದಿದ್ದರು ಈಗ ನಾವುಗಳು ಅದನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ, ಇಂದು ಅಮ್ಮನವರನ್ನು ಹೊಳಲ್ಕೆರೆಯ ಮಾರಮ್ಮನ ಗುಡಿಯಿಂದ ತಂದು ನಂತರ ಸುತ್ತಾ-ಮುತ್ತಲಿನ ಜನತೆ ಶ್ರದ್ಧೆ, ಭಕ್ತಿ ಮತ್ತು ಮಡಿವಂತಿಕೆಯಿಂದ ಹೂರಣ ಮಾಡಿ, ಹೋಳಿಗೆ ಬೇಯಿಸಿ, ಇದರೊಂದಿಗೆ ಬಾಳೆ ಹಣ್ಣು, ಹೂ, ಉದಿನ ಕಡ್ಡಿಯನ್ನು ಅಡಿಕೆ ಎಲೆ ಅಥವಾ ಮುತ್ತಗದ ಎಲೆಯಲ್ಲಿ ತಂದು ತಾಯಿಯ ಮುಂದೆ ಇರಿಸಿ ಪೂಜೆಯನ್ನು ನೇರವೇರಿಸಿ ಸಂಜೆ ನಮ್ಮ ಗಡಿಯನ್ನು ದಾಟಿಸಿ ಸಂತೇಪೇಟೆ ವೃತ್ತದಲ್ಲಿ ಇರಿಸಲಾಗುವುದು. ಇಲ್ಲಿಗೆ ಬರುವ ಗೃಹಿಣಿಯರು ನಮ್ಮ ಮನೆಯನ್ನು ಕಾಪಾಡು, ನಮ್ಮಲ್ಲಿ ಯಾರಿಗೂ ಸಹಾ ಯಾವುದೇ ರೀತಿಯ ರೋಗ ರುಜನ ಕಾಡದಂತೆ ರಕ್ಷಿಸು ಎಂದು ಅಮ್ಮನವರಲ್ಲಿ ಪ್ರಾರ್ಥಿಸುತ್ತಾರೆ ಎಂದು ಬಡಾವಣೆಯ ಹಿರಿಯರಾದ ಬಸವರಾಜಪ್ಪ ತಿಳಿಸಿದ್ದಾರೆ.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜನ-ಜಾನುವಾರುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಹೋಳಿಗೆಮ್ಮ .!ಬಿಜೆಪಿ ರಾಜ್ಯದ ಅನ್ನದಾತನ ಸಂಕಷ್ಟಕ್ಕೆ ಧ್ವನಿ: ಕೆ.ಎಸ್ ನವೀನ್.!ಸಿಕಂದರಾಬಾದ್‍ನಲ್ಲಿ ಯುಹೆಚ್‍ಕ್ಯೂ ಕೋಟಾದಡಿ ಅಗ್ನಿವೀರ್ ನೇಮಕಾತಿ ರ್ಯಾಲಿತಾಮ್ರದ ಪಾತ್ರೆಯಲ್ಲಿ ಲವಂಗಗಳನ್ನು ಇಟ್ಟು ನೀವು ಬೇಡಿಕೊಂಡರೆ ನಿಮ್ಮ ಮನಸ್ಸಿನ ಇಷ್ಟಾರ್ಥಗಳೆಲ್ಲಾ ಕಾರ್ಯಸಿದ್ಧಿ ಆಗುತ್ತವೆ ಲವಂಗ ತಂತ್ರ!ಕೃತಕ ಬುದ್ಧಿಮತ್ತೆ (AI)  ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 28-07-2026-ಅಮುಗೆ ರಾಯಮ್ಮ ಅವರ ವಚನತಂತ್ರಜ್ಞಾನ ಮತ್ತು ಮಾನವೀಯ ಮೌಲ್ಯಗಳು ಒಂದಾದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ – ಡಾ. ಶಾಲಿನಿ ರಜನೀಶ್ಸಕಲ ಕಷ್ಟಗಳ ಪರಿಹಾರಗಳು ಇಷ್ಟಾರ್ಥಗಳು ಸಿದ್ಧಿ ಆಗಬೇಕೆಂದರೆ ಶಿವನ ಮಂತ್ರವನ್ನು ಪಠಣೆ ಮಾಡಿ ಒಂದೇ ದಿನದಲ್ಲಿ ಪರಿಹಾರ!ನೀಟ್ ಮುಗಿತು ಎಥನಾಲ್ ಇ-20 ಪೆಟ್ರೋಲ್ ಬಗ್ಗೆ ಜು.31 ಹಾಗೂ ಆ.4ರಂದು ಈ ಪ್ರತ್ಯೇಕ ಪ್ರತಿಭಟನೇ.!