ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಸೂರ್ಯಂಗೆ ಅಲ್ಲಿ ಇಲ್ಲಿ ಎಂಬ ಸಂದೇಹವುಂಟೆ ?
ಎಲ್ಲೆಲ್ಲಿಯೂ ತನ್ನ ಪ್ರಭೆಯ ಬೀರುತಿಪ್ಪುದು.
ಬಲ್ಲ ಘನಮಹಿಮನ ಎಲ್ಲರು ಜರಿದಡೇನು ಕಿಂಕಿಲನೆ ?
ಸರ್ವಾಂಗವು ಲಿಂಗವಾದ ನಿರಾಲಂಬಿ
ಕಾಬರ ಕಂಡು ತಾ ಕಾಬವನಲ್ಲz
ಅರಿವವರ ಕಂಡು ತಾನರಿವವನಲ್ಲz
ಬಿಡುವವರ ಕಂಡು ತಾ ಬಿಡುವವನಲ್ಲ;
ಹಿಡಿದ ಛಲವ ತಾ ಬಿಡುವವನಲ್ಲ, ಅಮುಗೇಶ್ವರಲಿಂಗವನರಿದವನು.
-ಅಮುಗೆ ರಾಯಮ್ಮ