ಬೆಂಗಳೂರು: ರೇಷನ್ ಕಾರ್ಡ್ ಫಲಾನುಭವಿಗಳು ಇ-ಕೆವೈಸಿ ದೃಢೀಕರಿಸುವ ದಿನಾಂಕವನ್ನು ಮತ್ತೆ ವಿಸ್ತರಿಸಲಾಗಿದೆ. ಈ ಮೊದಲು ಇ-ಕೆವೈಸಿ ದೃಢೀಕರಿಸಲು ಅ. 20 ಕೊನೆಯ ದಿನಾಂಕವನ್ನು ನ. 10 ರವರೆಗೆ ವಿಸ್ತರಿಸಲಾಗಿದೆ.
ಇ-ಕೆವೈಸಿಗಾಗಿ 'ಅನ್ನಸೇವೆ'ಆ್ಯಪ್ ಸೌಲಭ್ಯವನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ವಿಸ್ತರಿಸಿದೆ. ಹೀಗಾಗಿ ಮನೆಯಲ್ಲೇ ಕುಳಿತು ಮೊಬೈಲ್ ನಲ್ಲಿ ಇಕೆವೈಸಿ ಪೂರ್ಣಗೊಳಿಸಬಹುದು. ಪಡಿತರ ಚೀಟಿಯ ಸೌಲಭ್ಯವನ್ನು ಮುಂದುವರಿಸಲು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.