LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಮಂಟೆ ಸ್ವಾಮಿ ಕಾವ್ಯದ ಮನನದಲ್ಲಿ ಒಂದು ಸುತ್ತು: ಡಾ. ವೆಂಕಟೇಶ್ ಇಂದ್ವಾಡಿ.!

ಮಂಟೆ ಸ್ವಾಮಿ ಕಾವ್ಯದ ಮನನದಲ್ಲಿ ಒಂದು ಸುತ್ತು: ಡಾ. ವೆಂಕಟೇಶ್ ಇಂದ್ವಾಡಿ.!

 

 ಬೆಡಗು

ಇದು ಕುರುಬನ ಕಟ್ಟೆ

ಅರಿವು ಕುರುಹಿನ ಕಟ್ಟೆ

ದಿಕ್ಕು ದಾರಿಗಳಿಲ್ಲ

ಉಲುಮೆ ಮೂಲೆ.

 

ಮೊದಲ ಪೂಜೆ

 

ದಟ್ಟಾರಣ್ಯಕ್ಕೆ ಎಲ್ಲಿಂದಲೋ. ಬಂದ ವಕ್ಕಲಿನ ಪರುಸೆ

ಸುತ್ತ ಮುತ್ತ ಇದ್ದ ಕೆರೆ ಕಟ್ಟೆಗಳಲ್ಲಿ ನೀರು ಮಿಂದು ಮಟ್ಟಿ ಕಪ್ಪು ಬಸ್ಮಾಂಗ ಧರಿಸಿ ಕಂಕುಳಲ್ಲಿ ಜೋಳುಗೆ ಕೈಯಲ್ಲಿ 

ನಾಗ ಬೆತ್ತ ವಿಡಿದು ದಂಡು ದಂಡು ದುಡಾಯಿಸಿ

ಅಡವಿಯೇ ಮೋಳಗುವಂತೆ

ಗಂಟೆ ಜಾಗಟೆ ಭಾರಿಸಿದಾಗ

 

 ಬಡಗ ಬಾಗಿಲ ಮಠ ಬೆಡಗಿನ ಚಂದ್ರ ಶಾಲೆ ಸೆಡೆಯೆತ್ತಿ ನಿಂತ ನಾಗಲಿಂಗ ಪುಷ್ಪ ಪಾರಿಜಾತ ಪಾರಿವಾಳ ಪಕ್ಷಿ ಸಂಕುಲ ಬರಮಾಡಿಕೊಳ್ಳುವ ಲಿಂಗದ ಪ್ರಕಾಶ

 

ಜೋಡಿ ಶರಣರ ಜೀವ ಗದ್ದುಗೆಗೆ ಮಠ-ಮಠ ಮಧ್ಯಾಹ್ನದ ಬಿಸಿಲು ಬಂದು ಸೇರುವ ಭಕುತರಿಗೆ   ದಣಿವಿಲ್ಲ

ಜಾತಿ ವಿಜಾತಿ ಸೋಂಕಿಲ್ಲ

 ಅವರು ಹಾಕಿದ ದೂಪದೊಗೆಗೆ ಆಕಾಶದಲ್ಲಿ ಭಂಗಿ ಮೋಡ ಘಮಲು

 

ಗಂಟೆ ಜಾಗಟೆ ತಮಟೆ ಕೊಂಬು ಕಹಳೆ ನಗಾರಿ ಮುಂದೆ ಬಸವ .ಕಷ್ಟ ಸುಖಕ್ಕೆ ಕುಣಿದು ಕುಪ್ಪಳಿಸುವ ಒಕ್ಕಲಿನ ಪರುಸೆ

ಹಸನ್ ಹುಸೇನ್ ಅವರನ್ನು ಕೊಂದ  ನೋವಿಗೆ  ನುಲಿವ ಕಂಡಾಯಗಳು 

 

ನಾಲ್ಕಮೂಲೆಯ ಕಿತ್ತ ಜೋಳುಗೆಯಲ್ಲಿ  ಬಂದ ದಾಸೋಹಕ್ಕೆ

ಭಿಕ್ಷೆ ಬೇಡುವ ಗುರುವ ಗುಡ್ಡಯ್ಯಗಳು ಶರಣು ಶರಣಾರ್ಥಿ ನೀವಿಟ್ಟ ನಿಯಮಕ್ಕೆ

 

ಎರಡನೇ ಪೂಜೆ

 

 

ಉಲಿವ ಹಕ್ಕಿಗಳ ಕೂಗು

ನಲಿವ ನವಿಲುಗಳ ನರ್ತನ

 ಜಿಂಕೆ ಸಾರಂಗಗಳ ಹುಂಕಾರ

ಘೂಳಿಡವ  ನರಿ ತೋಳಗಳು

ಘರ್ಜಿಸುವ  ಗಜ ಗಣಂಗಳು

ಕಳಿಸಿ ಎದ್ದು ನಿಂತ ವ್ಯಾಘ್ರನ ನಮಸ್ಕಾರ

 

ನಂತರ ತಣ್ಣಗೆ ಹರಿವ ಹೊಳೆಯಲ್ಲಿ ಉಣ್ಣುವ ಪರುಸೆಗೆ ತಂಗಾಳಿಯ ತಂಪು ವರ್ಷಕ್ಕೆ ಒಂದೇ ಪಂತಿ ಸೇವೆ ಒಂದು ಬಾಡೂಟ ಒಂದು ವರ್ಷದ ಶಕ್ತಿ ನಿತ್ಯ ತಿಂದು ತೆಗುವರೆತ್ತ ಬಲ್ಲರು

ಇದರ ಸವಿಯ.

ಇವೆಲ್ಲ ಮುಗಿದು ಹೋಗುತ್ತದೆ

 ಒಂದೇ ದಿನದಲ್ಲಿ 

 

ನೀರವ ಜೋಡಿ ಶರಣರ ಧ್ಯಾನಕ್ಕೆ

ಭಂಗ ತರುವ ಭಕುತರು

ಇವರಲ್ಲ ಅವರು ಹಚ್ಚಿದ ಗಂಧ ಗಾಳಿ ಎಂದು ಕೆಡುವುದಿಲ್ಲ

 

ಮೂರನೇ ಪಾದ

 

 

ಜೀವ ಗದ್ದುಗೆಯಿಂದ ಎದ್ದ ಶರಣರು ಎಲ್ಲೆಲ್ಲಿ ಸಂಚರಿಸುವರು ಬಲ್ಲವರಾರರು ಟ್ಟಂ ಸರಿರಾತ್ರಿ ಗಂಗಾದೇವಿ ನಿದ್ದೆ ಮಾಡುವ ಟೈಮ್ ಅಕ್ಷಿ ಪಕ್ಷಿ ದನಿ ಇಲ್ಲ

ಗಿಡ ಮರಗಳ ಸುಳುವಿಲ್ಲ

 

ಮಾಲಂಗಿ ಮಡುವಲ್ಲಿ ನೀರು ಓಂ ಎಂಬ ಶಬ್ದಕ್ಕೆ ಹೊಳೆ ಒಡೆದು ಹೋಳಾಗಿ ದಟ್ಟನೇ ಎದ್ದ ಧರೆಗೆ ದೊಡ್ಡವರಿಗೆ

ಅಪ ಶಕುನವೆಂದ ಅಕಾಲ ಪಕ್ಷಿ

 

ಮಡಿವಾಳ ಮಾಚಯ್ಯನ ಕಾವಿ ಮಡಿ ಹುಟ್ಟು, ಮಾದರಿ ಚೆನ್ನಯ್ಯನ ಉರಿಚಮ್ಮಾಳಿಗೆ ತೊಟ್ಟು ಮಲ್ಲಿಗೆ ಮಾದೇವಿಯ ಕಣ್ಣುಗಳನ್ನೇ ಕಣ್ಣುಗಳನ್ನು ಪೆಂಜಾಗಿಸಿಕೊಂಡು ಬಿರುದು ಬಿಂಕಗಳನ್ನು ಧರಿಸಿ

ಒಂದು ಹೆಜ್ಜೆ ತೆಗೆದು ಭೂಮಂಡಲದ ಮೇಲೆ ಮೇಲಿಟ್ಟಾಗ ಘಡಘಡಿಸಿ ಹೋಯ್ತು ಭೂಮಿ

 

ಸಿಸು.ಮಕ್ಕಳೇ ಕಲಿ ಗೋಚರವಾಗಿದೆ ಕಣ್ಣಿಂದ ನೋಡಲಾರೆ  ನಾನು ಮರೆತವರು  ಲೋಕಕ್ಕೆ ಮಗುವಾಗಿ ಬೇಕಕು ಎಂದು ಮರೆತು ಲೋಕಕ್ಕೆ ಮರೆಯಾಗಿ ಹೋದರು

 

ಅವರ ಇಹ ಪರ ಜೀವನದ ಕಥೆ  ನೀಲಗಾರರಿಗೆ ಉಪಜೀವನವಾಯಿತು .

ತಾಳ ತುಂಬುರಿ ಹಿಡಿದು     ತಾಳು ತುದಿ ಇಲ್ಲದ ಹಾಡನ್ನು ಹಾಡಿದಷ್ಟು ಬೆಳೆಯುತ್ತಿದೆ ಬದುಕಿನ     ಜಾಡು ಸಿಕ್ಕಿಲ್ಲ .

 

news_1787536538_0_271.webp

ಡಾ. ವೆಂಕಟೇಶ್ ಇಂದ್ವಾಡಿ.!

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಸಕ ಸಮರ್ಥ್ ಶಾಮನೂರು ಪ್ರಯಾಣಿಸುತ್ತಿದ್ದ ಕಾರು ಅಪಘಾತ.!ಅದ್ದೂರಿ ಮದಕರಿ ನಾಯಕ ಜಯಂತ್ಯುತ್ಸವ: ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ.!  ದೇಶದಲ್ಲಿ ಅರಾಜಕತೆ ಸೃಷ್ಟಿಗೆ ರಾಹುಲ್ ಗಾಂಧಿ ಕುಮ್ಮಕ್ಕು: ಸಂಸದ ಕಾರಜೋಳ ಆರೋಪಶತ್ರು ವಿನಾಶಕ ತಂತ್ರ! ಈ ವಸ್ತು ಇದ್ದರೆ ಶತ್ರು ನಿಮ್ಮ ಪಾದಕ್ಕೆ ಬೀಳುವಂತೆ ಮಾಡಬಹುದುವೈದ್ಯಕೀಯ ಕೋರ್ಸ್‌ಗಳ CET ತಾತ್ಕಾಲಿಕ ಫಲಿತಾಂಶ ಪ್ರಕಟ.!ಭಾರತದ ವನಿತೆಯರ ಲಾಂಗ್ ಜಂಪ್‌ನಲ್ಲಿ ಸಾಧನೆಮಂಟೆ ಸ್ವಾಮಿ ಕಾವ್ಯದ ಮನನದಲ್ಲಿ ಒಂದು ಸುತ್ತು: ಡಾ. ವೆಂಕಟೇಶ್ ಇಂದ್ವಾಡಿ.!ತಿಳುವಳಿಕೆ ಕೊಡುವ ಕಾವ್ಯಕ್ಕೆ ಹಿಂದಿನಿಂದಲೂ ವಿಶೇಷ ಮಾನ್ಯತೆ; ಡಾ.ಬಿ.ರಾಜಶೇಖರಪ್ಪ.!-ಬಸವಣ್ಣ ಅವರ ವಚನ.!ಈ ಶಕ್ತಿಶಾಲಿಯಾದ ಮಂತ್ರವನ್ನು 11 ಬಾರಿ ಪಟನೆ ಮಾಡುವುದರಿಂದ ನೀವು ಪ್ರೀತಿಸಿದವರು ಮೊದಲಿನಂತೆ ಸರಿಯಾಗುತ್ತಾರೆ