-ಉಳಿಯುಮೇಶ್ವರ ಚಿಕ್ಕಣ್ಣ ಅವರ ವಚನ.!
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಅಸ್ಥಿ, ಚರ್ಮ, ಮಾಂಸ, ರಕ್ತ, ಖಂಡದ ಚೀಲ
ಬಾ[ತೆ]ಗೆಟ್ಟೊಡಲ ನಾನೆಂತು ಸಲಹುವೆನಯ್ಯಾ?
ಹುರುಳಿಲ್ಲದಿಹ ಸಂಸಾರ
ಎಂದಿಂಗೆ ನಾನಿದ ಹೊತ್ತು ತೊಳಲುವುದೆ ಬಿಡುವೆನಯ್ಯಾ?
ಎಂದಿಂಗೆ ನಾನಿದರ ಸಂಶಯವನಳಿವೆನಯ್ಯಾ?
ಎಡಹಿ ಕೊಡ ನೀರೊಳಗೆ ಒಡೆದಂತೆ
ಎನ್ನೊಡಲೊಡೆದು ನಿಮ್ಮೊಳೆಂದು ನೆರೆವೆನೊ ಉಳಿಯುಮೇಶ್ವರಾ.
-ಉಳಿಯುಮೇಶ್ವರ ಚಿಕ್ಕಣ್ಣ