LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಕಾನೂನು ನೆರವಿನಿಂದ ಯಾರು ವಂಚಿತರಾಗಬಾರದು ನ್ಯಾಯಾಧೀಶರಾದ ಗಂಗಾಧರ ಚನ್ನಬಸಪ್ಪ ಹಡಪದ್.!

ಕಾನೂನು ನೆರವಿನಿಂದ ಯಾರು ವಂಚಿತರಾಗಬಾರದು ನ್ಯಾಯಾಧೀಶರಾದ ಗಂಗಾಧರ ಚನ್ನಬಸಪ್ಪ ಹಡಪದ್.!

 

ಚಿತ್ರದುರ್ಗ : ಕಾನೂನು ನೆರವಿನಿಂದ ಯಾರು ವಂಚಿತರಾಗಬಾರದು. ಪ್ರತಿಯೊಬ್ಬರಿಗೂ ಸಮಾಜದಲ್ಲಿ ನ್ಯಾಯ ಸಿಗಬೇಕೆನ್ನುವುದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶ ಎಂದು ಎರಡನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಪೋಕ್ಸೋ ಕೇಸ್ಗಳ ವಿಶೇಷ ನ್ಯಾಯಾಧೀಶರಾದ ಗಂಗಾಧರ ಚನ್ನಬಸಪ್ಪ ಹಡಪದ್ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪದವಿ ಪೂರ್ವ ಶಿಕ್ಷಣ ಇಲಾಖೆ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ರಾಷ್ಟ್ರೀಯ ಕಾನೂನು ಸೇವಾ ದಿನ ಉದ್ಘಾಟಿಸಿ ಮಾತನಾಡಿದರು.

1985 ರಲ್ಲಿ ಕಾನೂನು ಸೇವಾ ಪ್ರಾಧಿಕಾರ ಜಾರಿಗೆ ಬಂದಿತು. ನ್ಯಾಯಾಲಯದ ಪ್ರಕರಣಗಳಲ್ಲಿ ಕೆಲವರಿಗೆ ವಕೀಲರುಗಳನ್ನು ನೇಮಿಸಿಕೊಳ್ಳುವ ಶಕ್ತಿಯಿರುವುದಿಲ್ಲ.  ಅಂತಹವರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ವಕೀಲರುಗಳು ಕೇಸ್ ನಡೆಸಲಿದ್ದಾರೆ. ಮೂರು ತಿಂಗಳಿಗೊಮ್ಮೆ ನಡೆಯುವ ಲೋಕ ಅದಾಲತ್ನಲ್ಲಿ ಎರಡು ಕಡೆಯವರನ್ನು ಕರೆಸಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು. ಪ್ರತಿ ಶಾಲಾ-ಕಾಲೇಜುಗಳಲ್ಲಿ ಲೀಗಲ್ ಕ್ಲಿನಿಕ್ ತೆರೆಯಬೇಕು. ಕ್ರಿಮಿನಲ್ ಪ್ರಕರಣಗಳಲ್ಲಿಯೂ ಉಚಿತ ಕಾನೂನು ನೆರವು ಸಿಗುತ್ತದೆ. ದೇಶದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವಿದೆ. ಪ್ರತಿಯೊಬ್ಬರಿಗೂ ಕಾನೂನು ಅರಿವು ನೆರವು ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶ ಎಂದು ತಿಳಿಸಿದರು.

ಚಿತ್ರದುರ್ಗ ಮೆಡಿಕಲ್ ಕಾಲೇಜಿನ ಡಾ. ರಾಜೇಶ್ವರಿ ಕೆ.ಎಂ. ಮಾತನಾಡಿ ಮಾದಕ ವ್ಯಸನಿಗಳನ್ನು ಹೀಯಾಳಿಸಿ ಅವಮಾನ ಮಾಡುವ ಬದಲು ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಹದಿಹರೆಯದವರು ಮುಂದೆ ಒಳ್ಳೆಯ ಜೀವನ ಮಾಡಬೇಕಾದರೆ ಮಾದಕ ವ್ಯಸನಗಳಿಗೆ ಬಲಿಯಾಗಬೇಡಿ. ಕೆಲವೊಮ್ಮೆ ಯಾರದೋ ಒತ್ತಡ ಹಾಗೂ ಮತ್ತೊಬ್ಬರನ್ನು ಮೆಚ್ಚಿಸಲಿಕ್ಕಾಗಿ ಮಾದಕ ವಸ್ತುಗಳನ್ನು ಸೇವಿಸುವುದುಂಟು. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ದುಷ್ಪರಿಣಾಮ ಬೀರಲಿದೆ ಎಂದು ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಿದರು.

ಶ್ರದ್ದೆ, ಶಿಸ್ತು ಹಾಗೂ ಸಮಯ ಪ್ರಜ್ಞೆ ಮೂಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬಹುದು. ಹದಿಹರೆಯದ ವಯಸ್ಸಿನಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಬದಲಾವಣೆಯಾಗುವುದು ಸಹಜ. ಮಾದಕ ವ್ಯಸನಿಗಳು ಕೆಲವೊಮ್ಮೆ ಸಾಹಸ ಪ್ರವೃತ್ತಿಗೂ ಕೈಹಾಕುವುದುಂಟು. ಡ್ರಗ್ಸ್ ಜೀವನವನ್ನು ಕಸಿದುಕೊಳ್ಳುವುದಲ್ಲದೆ ಮನೆಯಲ್ಲಿ ಅಶಾಂತಿಯನ್ನುಂಟು ಮಾಡುತ್ತದೆ. ಅಪೌಷ್ಠಿಕತೆಯಿಂದ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳಬಹುದು. ಆತಂಕ, ಕಿರಿಕಿರಿ, ಖಿನ್ನತೆಗೆ ಒಳಗಾಗುತ್ತಾರೆ.

ಜ್ಞಾಪಕ ಶಕ್ತಿ ಕಡಿಮೆಯಾಗುತ್ತದೆ. ನಿಮ್ಮ ಭಾವನೆಗಳ ಮೇಲೆ ನಿಯಂತ್ರಣವಿಟ್ಟುಕೊಳ್ಳಿ. ಅಮೂಲ್ಯವಾದ ಸಮಯ ವ್ಯರ್ಥವಾದರೆ ಮರಳಿ ಸಿಗುವುದಿಲ್ಲ. ಶಿಕ್ಷಣದ ಜೊತೆ ಜೀವನದಲ್ಲಿ ಏನಾದರೂ ಸಾಧನೆ ಮಾಡುವ ಹವ್ಯಾಸಿ ಬೆಳೆಸಿಕೊಂಡು ಪೋಷಕರು, ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಯಿರಿ ಎಂದು ಬಾಲಕಿಯರಿಗೆ ಮನವರಿಕೆ ಮಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಮೀರ್ ಪಿ.ನಂದ್ಯಾಲ್ ಮಾತನಾಡುತ್ತ ಪ್ರತಿ ವರ್ಷವೂ

ನ.9 ರಂದು ರಾಷ್ಟ್ರೀಯ ಕಾನೂನು ಸೇವಾ ದಿನವನ್ನಾಗಿ ಆಚರಿಸಲಾಗುವುದು. ಕಾನೂನು ಅರಿವಿನ ಕೊರತೆಯಿಂದ ನ್ಯಾಯಾಲಯದಲ್ಲಿ ಕೇಸ್ಗಳು ಜಾಸ್ತಿಯಾಗುತ್ತಿವೆ.

ಮಾದಕ ಹಾಗೂ ಮಾನಸಿಕ ವ್ಯಸನಿಗಳಿಗೆ ಚಿಕಿತ್ಸೆ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಜಿಲ್ಲೆಯಲ್ಲಿ 268 ಕೇಸ್ಗಳಿವೆ. ಮಾದಕ ವ್ಯಸನಿಗಳಲ್ಲಿ ಕೆಲವು ಬಾಲಕಿಯರು ಇದ್ದಾರೆಂದು ನುಡಿದರು.

ತಂದೆ-ತಾಯಿ ಕಷ್ಟಪಟ್ಟು ನಿಮ್ಮನ್ನು ಶಾಲೆ-ಕಾಲೇಜುಗಳಿಗೆ ಕಳಿಸುತ್ತಾರೆ. ಆಕರ್ಷಣೆಗೆ ಒಳಗಾಗದೆ ಶಿಕ್ಷಣದ ಕಡೆ ಗಮನ ಕೊಟ್ಟು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿನಿಯರಲ್ಲಿ ಮನವಿ ಮಾಡಿದರು.

ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಯೀಮ್ ಅಹಮದ್ ಟಿ.ಎಂ. ಮಾತನಾಡಿ ಮಾದಕ ವಸ್ತುಗಳನ್ನು ಸೇವಿಸುವವರು ಮಾನಸಿಕ ಹಾಗೂ ದೈಹಿಕವಾಗಿ ನಾನಾ ರೀತಿಯ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೃದಯಾಘಾತ, ಲಿವರ್, ಕಿಡ್ನಿ, ಲಂಗ್ಸ್ ಮೇಲೆ ದುಷ್ಪರಿಣಾಮ ಬೀರುತ್ತದೆ. ಜಗತ್ತಿನಲ್ಲಿ ಇಪ್ಪತ್ತು ಮಿಲಿಯನ್ ಮಾದಕ ವ್ಯಸನಿಗಳಿದ್ದು, ಐದು ಲಕ್ಷ 70 ಸಾವಿರ ಜನ ಪ್ರತಿ ವರ್ಷ ಸಾಯುತ್ತಿದ್ದು, ಹತ್ತಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗಾಂಜಾ ಬೆಳೆದು ಮಾರಾಟ ಮಾಡುವವರಿಗೆ ಆರು ತಿಂಗಳಿನಿಂದ ಇಪ್ಪತ್ತು ವರ್ಷಗಳವರೆಗೆ ಶಿಕ್ಷೆಯಿರುತ್ತದೆ. ಬ್ರೌನ ಶುಗರ್ ಅತ್ಯಂತ ಅಪಾಯಕಾರಿ. ವಿದ್ಯಾರ್ಥಿ ಜೀವನದಲ್ಲಿ ಕೆಟ್ಟ ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಬಾಲಕಿಯರಿಗೆ ಕರೆ ನೀಡಿದರು.

ಮಾದಕ ವ್ಯಸನಿ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಏಕಾಂಗಿಯಾಗಿರಲು ಬಯಸುತ್ತಾನೆ. ದೇಶವನ್ನು ಮಾದಕ ಸೇವನೆ ಮುಕ್ತವನ್ನಾಗಿಸಿ ಆರೋಗ್ಯ ಪೂರ್ಣ ಸಮಾಜ

ಕಟ್ಟುವಲ್ಲಿ ನಿಮ್ಮಗಳ ಪಾತ್ರ ಮುಖ್ಯ ಎಂದು ಬಾಲಕಿಯರಲ್ಲಿ ಅರಿವು ಮೂಡಿಸಿದರಲ್ಲದೆ ಮಹಿಳೆ ಮಕ್ಕಳ ಮೇಲೆ ಎಲ್ಲಿಯೇ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರಗಳು ನಡೆದರೆ ಅಪರಾಧವಾಗುತ್ತದೆ. ಮನೆಗಳಲ್ಲಿ ತಂದೆ ತಾಯಿಗಳಿಂದಲೂ ಮಕ್ಕಳ ಮೇಲೆ ಕ್ರೌರ್ಯ ನಡೆದಲ್ಲಿ ಇಲಾಖೆ ಗಮನಕ್ಕೆ ತನ್ನಿ ಎಂದು ವಿನಂತಿಸಿದರು.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸಣ್ಣಪಾಲಯ್ಯ ಪಿ.ಎ. ಅಧ್ಯಕ್ಷತೆ ವಹಿಸಿದ್ದರು.

ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಎಸ್.ಮಹೇಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಓ.ಜಗದೀಶ್ ಗುಂಡೇರಿ, ಹಿರಿಯ ಉಪನ್ಯಾಸಕ ಶ್ರೀನಿವಾಸ್ ಹೆಚ್. ಇವರುಗಳು ವೇದಿಕೆಯಲ್ಲಿದ್ದರು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿಉದ್ಯೋಗದಲ್ಲಿ  ಅಭಿವೃದ್ಧಿಯಾಗಬೇಕಾ ವ್ಯಾಪಾರದಲ್ಲಿ ಸಾಕಷ್ಟು ರೀತಿಯ ಪ್ರಯೋಜನ ಸಿಗಬೇಕೆಂದರೆ ಈ ತಂತ್ರವನ್ನು ಮಾಡಿ.!!!!!!!ಪಡಿತರ ಚೀಟಿದಾರರು ಇ-ಕೆವೈಸಿ ಪ್ರಕ್ರಿಯೆಗೆ ನಿಗದಿಪಡಿಸಿದ್ದ ಗಡುವು ನವೆಂಬರ್ 30 ಕ್ಕೆ ಕೊನೆಯ ದಿನಾಂಕ!ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಲ್ಲಿದೆ ಅಮೆಜಾನ್‌ನ ಸ್ಕಾಲರ್‌ಶಿಪ್ ವಿವರ.!ಕಾನೂನು ನೆರವಿನಿಂದ ಯಾರು ವಂಚಿತರಾಗಬಾರದು ನ್ಯಾಯಾಧೀಶರಾದ ಗಂಗಾಧರ ಚನ್ನಬಸಪ್ಪ ಹಡಪದ್.!ನ.20ರಂದು ಗ್ರಾಮ ಪಂಚಾಯಿತಿ ಕರವಸೂಲಿಗಾರ ಹುದ್ದೆಗೆ: ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ..!ನೀರಾವರಿ ಈರುಳ್ಳಿ ಬೆಳೆಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ: ನೋಂದಣಿಗೆ ನವೆಂಬರ್ 30 ಕೊನೆಯ ದಿನ.!-ಅಂಬಿಗರ ಚೌಡಯ್ಯ ನವರ ವಚನರಾಮಾಯಣ' ಚಿತ್ರ: ಇಲ್ಲಿಗೆ ಎಷ್ಟು ಕಲೆಕ್ಷನ್ .?ದಂಪತಿಗಳಲ್ಲಿ ಇದ್ದಕ್ಕಿದ್ದ ಹಾಗೆ ಮನಸ್ತಾಪ ಬಂದು ವಿಚ್ಛೇದನಾಗಲಿಕ್ಕೆ ಜಾತಕಗಳ ಪ್ರಕಾರ ಇಂತಹ ಗ್ರಹಗಳು ಕಾರಣವಾ ತಿಳಿಯಿರಿ?