ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ತತ್ವಭಕ್ತಿ, ತತ್ವಮುಕ್ತಿ,
ತತ್ವ ಉತ್ಪತ್ಯದ ತನು ಸಾರಾಯ
ತತ್ವವೃಕ್ಷದಿಂದ ಪುಟ್ಟಿದವು.
ಎಂಬತ್ತು ನಾಲ್ಕು ಲಕ್ಷ ಸಂಕಲ್ಪವೆಲ್ಲ ತತ್ವಾದಿಗಳು.
ಯಾತಕ್ಕೆ ಭೇದವ ಮಾಳ್ಪಿರಯ್ಯಾ ?
ಪೃಥ್ವಿ ಪೃಥ್ವಿಯ ಕೂಡಿತು
ಅಪ್ಪು ಅಪ್ಪುವ ಕೂಡಿತು
ವಾಯು ವಾಯುವ ಕೂಡಿತು
ಆಕಾಶ ಆಕಾಶದೊಳು ಸಹಕಾರ್ಯವಾಯಿತು.
ಆ ಭಕ್ತನ ವಿಭೇದವಿಲ್ಲದ ಕಾರಣದಿಂದ
ಶರೀರ ಭಿನ್ನವಾಗದು ಕಾಣಾಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
-ವೀರಸಂಗಯ್ಯ