ಬೆಂಗಳೂರು: ವೆಜ್ ಮತ್ತು ನಾನ್ವೆಜ್ ಹೋಟೆಲ್ ಗಳಿಗೆ ಸರಕಾರ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಬಿಡುಗಡೆಮಾಡಿದೆ.
* ವೆಜ್ ಮತ್ತು ನಾನ್ವೆಜ್ ಆಹಾರಕ್ಕೆ ಪ್ರತ್ಯೇಕ ಸಂಗ್ರಹಣೆ ಹಾಗೂ ನಿರ್ವಹಣೆ ಕಡ್ಡಾಯ.
* ತಯಾರಿಸಿದ ಆಹಾರ ಮತ್ತೆ ಬಿಸಿ ಮಾಡುವಾಗ 75°C ತಾಪಮಾನ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ಬಳಸಬೇಕು.
* ಜೊತೆಗೆ FSSAI ಅಂಗೀಕೃತ ಪ್ರಮಾಣ ಪತ್ರ ಹೋಟೆಲ್ ಬಲ್ಲಿ ಪ್ರದರ್ಶನ ಮಾಡಬೇಕು. ಹೀಗೆ ಹಲವು ಅಂಶಗಳ ಒಳಗೊಂಡ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಖಡಕ್ ಸೂಚನೆ ನೀಡಿದೆ.
* ಮಾಂಸಹಾರವನ್ನು 4°C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು.
* ವೆಜ್ ಆಹಾರ 65°C & ನಾನ್ವೆಜ್ ಆಹಾರ 70°C ತಾಪಮಾನದಲ್ಲಿ ಇಡಬೇಕು.
* ಶೀತ ಆಹಾರ 5°C & ಪ್ರೋಜನ್ ಆಹಾರ -18°C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಇರಿಸಬೇಕು.
* ಅಡುಗೆ 25% TPC ಮೀರದಂತೆ ಎಣ್ಣೆಯನ್ನು ಆಹಾರಕ್ಕೆ ಬಳಸಬೇಕು.
* ಕಚ್ಚಾ ಆಹಾರ, ಅರೆಬೆಂದ ಆಹಾರ & ಪೂರ್ಣವಾಗಿ ಬೇಯಿಸಿದ ಆಹಾರವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು.