LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಉದ್ಯೋಗ ಸೇತು’ ಯೋಜನೆ: ನಿರುದ್ಯೋಗಿಗಳಿಗೆ, ಕಂಪನಿಗಳಿಗೆ ನೋಂದಣಿಗೆ ಸೂಚನೆ

ಉದ್ಯೋಗ ಸೇತು’ ಯೋಜನೆ: ನಿರುದ್ಯೋಗಿಗಳಿಗೆ, ಕಂಪನಿಗಳಿಗೆ ನೋಂದಣಿಗೆ ಸೂಚನೆ

 

ಚಿತ್ರದುರ್ಗ: ಮುಖ್ಯಮಂತ್ರಿಗಳ 100 ದಿನಗಳ ಕಾರ್ಯಕ್ರಮದಲ್ಲಿ ಘೋಷಿಸಿರುವ ‘ಉದ್ಯೋಗ ಸೇತು’ ಯೋಜನೆಯಡಿ ಜಿಲ್ಲೆಯ ಎಲ್ಲ ನಿರುದ್ಯೋಗಿ ಅಭ್ಯರ್ಥಿಗಳು ಹಾಗೂ ಖಾಸಗಿ ಕಂಪನಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ತಿಳಿಸಿದೆ.   

ಈ ಯೋಜನೆಯ ಮೂಲಕ ರಾಜ್ಯದ ನಿರುದ್ಯೋಗಿಗಳು, ಯುವನಿಧಿ ಯೋಜನೆ ಫಲಾನುಭವಿಗಳು ಹಾಗೂ ಹೆಸರಾಂತ ಖಾಸಗಿ ಕಂಪನಿಗಳನ್ನು ವಿಶೇಷ ಪೋರ್ಟಲ್‍ನಲ್ಲಿ ನೋಂದಾಯಿಸಿ ನೇರ ಸಂಪರ್ಕ ಕಲ್ಪಿಸಲಾಗುವುದು. ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಅನುಭವಕ್ಕೆ ಅನುಗುಣವಾಗಿ ಖಾಲಿ ಹುದ್ದೆಗಳಿಗೆ ಮ್ಯಾಚಿಂಗ್ ಮಾಡಿ ಉದ್ಯೋಗ ಒದಗಿಸುವುದು ಹಾಗೂ ಕೌಶಲ್ಯ ಕೊರತೆ ಇರುವವರಿಗೆ ಉಚಿತ ಕೌಶಲ್ಯ ತರಬೇತಿ ನೀಡುವುದು ಯೋಜನೆಯ ಉದ್ದೇಶವಾಗಿದೆ.

ಜಿಲ್ಲೆಯ ನಿರುದ್ಯೋಗಿ ಅಭ್ಯರ್ಥಿಗಳು ಮತ್ತು ಪ್ರಮುಖ ಖಾಸಗಿ ಕಂಪನಿಗಳು https://yuvaudyogasethu.karnataka.gov.in/ ಫೋರ್ಟಲ್ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗೆ ಚಿತ್ರದುರ್ಗದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಅಥವಾ ದೂರವಾಣಿ ಸಂಖ್ಯೆ 9945587060, 7019755147, 7022459064, 8105619020, 7892876162 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಾಸ ಸಾಹಿತ್ಯದ ಮೂಲಕ ಜನಸಾಮಾನ್ಯರನ್ನು ತಲುಪಿದ ಕನಕದಾಸರು : ಸಚಿವ ಟಿ.ರಘುಮೂರ್ತಿದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 28-11-2026ಭಕ್ತಕನಕದಾಸರ 539 ನೇ ಜಯಂತಿ: ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದ ಜಿಲ್ಲಾಧಿಕಾರಿ ಎಸ್.ರಮ್ಯ.!ಉದ್ಯೋಗ ಸೇತು’ ಯೋಜನೆ: ನಿರುದ್ಯೋಗಿಗಳಿಗೆ, ಕಂಪನಿಗಳಿಗೆ ನೋಂದಣಿಗೆ ಸೂಚನೆತುಮಕೂರಿನಲ್ಲಿ ಶಾಶ್ವತ ಕಲಾ ಗ್ಯಾಲರಿಯ ಅಗತ್ಯವಿದೆ: ಸಾಹಿತಿ -ಎಸ್. ನಟರಾಜ್ ಬೂದಾಳ್-ಜಕ್ಕಣಯ್ಯ ಅವರ ವಚನ .!ಶುಕ್ರವಾರದಂದು ಕುಬೇರನ ಈ ಮಂತ್ರ ಪಠಿಸಿ, ನಿಮ್ಮ ಎಲ್ಲಾ ಕಷ್ಟ, ಸಮಸ್ಯೆಗಳು ಪರಿಹಾರ...!ಸಂವಿಧಾನದ ಆಶಯಗಳಿಗೆ ಪೂರಕವಾಗಿ ಯುವ ಜನತೆ ಮುನ್ನಡೆಯಲಿ ಜಿಲ್ಲಾಧಿಕಾರಿ ಎಸ್.ರಮ್ಯಾ.!ಯೋಗದ ಮೂಲಕ ವಿಶ್ವವನ್ನೇ ಬೆಳಗಿದ ಕನ್ನಡಿಗನಿಗೆ ಅಂತಾರಾಷ್ಟ್ರೀಯ ಗೌರವ.!ಜಗತ್ತಿನಲ್ಲಿಯ ಅತ್ಯಂತ ಉತ್ಕøಷ್ಟವಾದ ಸಂವಿಧಾನ ನಮ್ಮದು.! ನ್ಯಾಯಾಧೀಶರಾದ ಶಮೀರ್ ಪಿ ನಂದ್ಯಾಲ್