ಚಿತ್ರದುರ್ಗ: ಕಾಂಗ್ರೆಸ್ ವೀಕ್ ಆಗಿ ಇಪ್ಪತ್ತು ವರ್ಷಗಳೇ ಆಗಿದೆ. ಕಾಂಗ್ರೆಸ್ ಪುನಶ್ಚೇತನ ಆಗುವ ಪರಿಸ್ಥಿತಿ ಇಲ್ಲ.ಕಾಂಗ್ರೆಸ್ ಪಕ್ಷ ನಾಯಕತ್ವದಿಂದ ಬಳಲುತ್ತಿದೆ. ಒಂದೆರಡು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಇದೆ. ಸತ್ತ ಪ್ರಾಣಿಯನ್ನು ರಣಹದ್ದು ತಿಂದಂತೆ ತಿನ್ನುತ್ತಿದ್ದಾರೆ. ಎಂದು ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಸಂಸದ ಗೋವಿಂದ ಕಾರಜೋಳ ಕಿಡಿ ಕಾರಿದ್ದಾರೆ.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾಜಿ ಸಚಿವರಾದ ಕೆ ಎನ್ ರಾಜಣ್ಣರವರ ಸಿದ್ಧರಾಮಯ್ಯ ವೀಕ್ ಆದರೆ ಕಾಂಗ್ರೆಸ್ ವೀಕ್ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಕಾರಜೋಳ ದೆಹಲಿ ಹಿಡಿದು ಬೆಂಗಳೂರು, ದೆಹಲಿ ಹಿಡಿದು ತೆಲಂಗಾಣವರೆಗೆ. ಕಾಂಗ್ರೆಸ್ ಇದೆ ಕಾಂಗ್ರೆಸ್ಗೆ ಉತ್ತಮ ಆಡಳಿತ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಸಾಧ್ಯವಿಲ್ಲ.ಸ್ವಜನ ಪಕ್ಷಪಾತದಿಂದ ಕಾಂಗ್ರೆಸ್ ಬಳಲುತ್ತಿದೆ. ಸೋನಿಯಾಗಾಂಧಿ ಮನೆ ಬಿಟ್ಟು ಹೊರಬರುವ ಸ್ಥಿತಿ ಕಾಂಗ್ರೆಸ್ ನಾಯಕರಿಗಿಲ್ಲ. ಪುನಃ ಅಧಿಕಾರಕ್ಕೆ ತರುವ ವಿಶ್ವಾಸ ಒಬ್ಬ ಕಾಂಗ್ರೆಸ್ ನಾಯಕರಲ್ಲೂ ಇಲ್ಲದಂಥಾಗಿದೆ ಎಂದು ಭವಿಷ್ಯ ನುಡಿದರು.
ವಂದೇ ಮಾತರಂ ಎರಡು ಚರಣ ಮಾತ್ರ ಹಾಡಬೇಕು ಅದನ್ನು ಮೀರಿದ ಅಧಿಕಾರಿಗಳನ್ನು ಅಮಾನತ್ತು ಮಾಸಲಾಗುವುದು ಎಂಬ ತಗಂಡಗಿರವರ ಹೇಳಿಕೆಗೆ ಪ್ರತಿಕ್ರಿಯಿಸಿ ಪೂರ್ಣ ವಂದೇ ಮಾತರಂ ಹಾಡಲ್ಲ ಎಂಬುದು ಮೂರ್ಖತನ. ರಾಜ್ಯ, ಕೇಂದ್ರ ಸರ್ಕಾರ ಒಟ್ಟಿಗೆ ಹೋಗಬೇಕು. ಇಬ್ಬರು ಒಂದು ಬಂಡಿಯ ಎರಡು ಗಾಲಿಗಳಂತೆ ನಡೆಯಬೇಕು. ಒಕ್ಕೂಟ ವ್ಯವಸ್ಥೆ ಅಂದರೇನು ಅವರಿಗೆ ಗೊತ್ತಿಲ್ಲ. ಮಂತ್ರಿ ಎಂದು ಯಾವನೋ ಒಬ್ಬ ಬಾಯಿಗೆ ಬಂದಂತೆ ಮಾತಾಡಿದರೆ ಅರ್ಥವಿಲ್ಲ. ವಂದೇ ಮಾತರಂ ಒಪ್ಪಲ್ಲ ಅಂದವರು ಮುಂದೆ ರಾಷ್ಟ್ರಗೀತೆ ಒಪ್ಪಲ್ಲ ಅಂತೀರಿ. ರಿಸರ್ವ್ ಬ್ಯಾಂಕ್ ಕೇಂದ್ರ ಅಧೀನದಲ್ಲಿ ಇದೆ. ನಾವೇ ವಿಧಾನಸೌಧದಲ್ಲಿ ನೋಟ್ ಪ್ರಿಂಟ್ ಮಾಡುತ್ತೇವೆ ಅಂದರೆ ಮೂರ್ಖತನವಾಗುತ್ತದೆ.. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಓಲೈಕೆ ಮಾತು ಸರಿಯಲ್ಲ ಎಂದು ಸಂಸದರು ಟೀಕಿಸಿದರು.
ಮಂಗಳೂರಲ್ಲಿ ಸಚಿವ ಸಂಪುಟ ಸಭೆ ಒಂದು ಗಿಮಿಕ್. ನಿನ್ನೆ ಕಲಬುರಗಿಯಲ್ಲಿ 1800 ಕೋಟಿ ರೂ ಘೋಷಣೆ ಮಾಡಿದ್ದಾರೆ.. ಖಜಾನೆಯೇ ಖಾಲಿ ಇದೆ, ಎಲ್ಲಿಂದ ಕೊಡುತ್ತಾರೆ. ರಾಜ್ಯದಲ್ಲಿ ಬರಗಾಲ ತಾಂಡವ ಆಡುತ್ತಿದೆ... ಜಿಲ್ಲೆಗೆ 100 ಕೋಟಿ ರೂ ಬರ ನಿರ್ವಹಣೆಗೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.