ಚಿತ್ರದುರ್ಗ: ಶ್ರಾವಣ ಕಡೇ ಸೋಮವಾರದ ಅಂಗವಾಗಿ ದೊಡ್ಡಪೇಟೆಯಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿನ ಬಸವೇಶ್ವರ ಮೂರ್ತಿಗೆ ಇಂದು ಬೆಳ್ಳಿಗೆ ಉಚ್ಚಂಗಿಯಲ್ಲಮ್ಮ ದೇವಾಲಯದ ಬಳಿಯಲ್ಲಿನ ಭಾವಿಯಿಂದ ಗಂಗೆಯನ್ನು ತರುವುದರ ಮೂಲಕ ಸ್ವಾಮಿಗೆ ರುದ್ರಾಭಿಷೇಕವನ್ನು ನಡೆಸಲಾಯಿತು.
ತದ ನಂತರ ಬಸವೇಶ್ವರ ಮೂರ್ತಿಗೆ ವಿವಿಧ ರೀತಿಯ ಹೂಗಳಿಂದ ಅಲಂಕಾರವನ್ನು ಮಾಡುವುದರ ಮೂಲಕ ಸ್ವಾಮಿಯನ್ನು ವಿಜೃಂಬಿಸಲಾಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಮಹಾ ಮಂಗಳಾರತಿಯನ್ನು ಮಾಡಿ ಪ್ರಸಾದವನ್ನು ನೀಡಲಾಯಿತು.
ನಂತರ ನೂತನವಾಗಿ ನಿರ್ಮಾಣ ಮಾಡಲಾದ 'ಬಸವ ಭವನ'ವನ್ನು ಮಾಜಿ ಶಾಸಕರಾದ ಎಸ್.ಕೆ ಬಸವ ರಾಜನ್, ವೀರಶೈವ ಅರ್ಬನ್ ಸೊಸೈಟಿ ಅಧ್ಯಕ್ಷರಾದ ಪಟೇಲ್ ಶಿವಕುಮಾರ್, ಮುಖಂಡರಾದ ಸಿದ್ದಾಪುರ ನಾಗಣ್ಣ ಉದ್ಘಾಟನೆ ಮಾಡಿದರು.
ಈ ವೇಳೆ ಸಿ.ಚಂದ್ರು, ಪಿ ಆರ್ ಜಗದೀಶ್, ರವಿಶಂಕರ್, ಜಯಣ್ಣ, ಎಸ್ ಷಣ್ಮುಖಪ್ಪ ದೊಡ್ಡಪೇಟೆ ಶಿವು, ಸಿದ್ದೇಶ್, ಮತ್ತಿತರರು ಉಪಸ್ಥಿತರಿದ್ದರು.