LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಹಿರೇಕಬ್ಬಿಗೆರೆ ಹಾಲು ಉತ್ಪಾದಕರ ಸಂಘದಲ್ಲಿ ಅಕ್ರಮ ವ್ಯವಹಾರ.!

ಹಿರೇಕಬ್ಬಿಗೆರೆ ಹಾಲು ಉತ್ಪಾದಕರ ಸಂಘದಲ್ಲಿ ಅಕ್ರಮ ವ್ಯವಹಾರ.!

 

ಚಿತ್ರದುರ್ಗ: ಹಿರೇಕಬ್ಬಿಗೆರೆ ಹಾಲು ಉತ್ಪಾದಕರ ಸಂಘದಲ್ಲಿ ಅಕ್ರಮ ವ್ಯವಹಾರ ಮಾಡುವುದರ ಮೂಲಕ ಸರ್ಕಾರಕ್ಕೆ ಹಾಗೂ ಸಂಘಕ್ಕೆ ಕೋಟ್ಯಾಂತರ ರೂಪಾಯಿಗಳ ವಂಚನೆ ಮಾಡಲಾಗಿದೆ. ಅಕ್ರಮಗಳಿಗೆ ನೆರವು ನೀಡಿರುವ ಒಕ್ಕೂಟದ ಅಧಿಕಾರಿಗಳಿಗೆ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಡಲಿತಕ್ಕೆ ಕರ್ನಾಟಕ ಜನಶಕ್ತಿ ಜಿಲ್ಲಾ ಸಮಿತಿ ಸೋಮವಾರ ಮನವಿಯನ್ನು ಸಲ್ಲಿಸಿದೆ.

  ಬಗ್ಗೆ ಅಪರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ ಕರ್ನಾಟಕ ಜನಶಕ್ತಿ ಜಿಲ್ಲಾ ಸಮಿತಿ ಜಿಲ್ಲಾ ಸಂಚಾಲಕರಾದ ಟಿ.ಶಫೀವುಲ್ಲಾರವರು ಹಿರೇಕಬ್ಬಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯದರ್ಶಿಗಳಾದ ಎಸ್.ಶೇಖರಪ್ಪ ಇವರು ತಮ್ಮ ಕುಟುಂಬದ ಸದಸ್ಯರುಗಳ ನಕಲಿ ಖಾತೆಗಳನ್ನು ಸೃಷ್ಟಿಮಾಡಿಕೊಂಡು ಸಂಘಕ್ಕೆ ಹಾಲನ್ನು ಸರಬರಾಜು ಮಾಡದೇ ಹಾಲಿನ ಬಟವಾಡೆ ಮಾಡಿಕೊಂಡಿರುತ್ತಾರೆ ಹಾಗೂ ಅವರ ಸಂಬಂಧಿಗಳು ಬೇರೆ ಊರಿನಲ್ಲಿ ವಾಸವಾಗಿದ್ದರೂ ಅವರ ಹೆಸರಿಗೂ ಕೂಡ ಹಾಲಿನ ಬಟವಾಡೆ ಮಾಡಿದ್ದು, ಸಹಕಾರಿ ಕಾಯ್ದೆಯನ್ನು ಉಲ್ಲಂಘನೆ ಮಾಡಿರುತ್ತಾರೆ. ಹಾಗೂ ಅಕ್ರಮ ಹಣ ವರ್ಗಾವಣೆ ಮಾಡುವುದರ ಮೂಲಕ ಸಂಘಕ್ಕೆ ವಂಚನೆ ಮಾಡಿರುತ್ತಾರೆ ಮತ್ತು ಸರ್ಕಾರದಿಂದ ನೀಡಲಾಗುವ ಲೀ. 5ರೂ ಸಹಾಯ ಧನವನ್ನು ನಕಲಿ ಖಾತೆಗಳಿಗೆ ಜಮಾ ಆಗುವಂತೆ ಮಾಡಿದ್ದು, ಸರ್ಕಾರಕ್ಕೆ ಮೋಸ ಮಾಡಿರುತ್ತಾರೆ. ಹಾಲಿಗೆ ನೀರನ್ನು ಬೆರೆಸಿ ತೂಕದಲ್ಲಿ ಮೋಸ ಮಾಡಿರುತ್ತಾರೆ. ಅಕ್ರಮ ವ್ಯವಹಾರ ಮಾಡುವುದರ ಮೂಲಕ ಸರ್ಕಾರಕ್ಕೆ ಹಾಗೂ ಸಂಘಕ್ಕೆ ಕೋಟ್ಯಾಂತರ ರೂಪಾಯಿಗಳ ವಂಚನೆ ಮಾಡಿರುತ್ತಾರೆ. ಇದೊಂದು ಗಂಭೀರವಾದ ಪ್ರಕರಣವಾಗಿದ್ದು, ಇವರಿಗೆ ಅಕ್ರಮಗಳಿಗೆ ನೆರವು ನೀಡಿರುವ ಒಕ್ಕೂಟದ ಅಧಿಕಾರಿಗಳಿಗೆ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.

 

ಎಸ್.ಶೇಖರಪ್ಪ ಹಾಗೂ ಅವರ ಕುಟುಂಬ ಸದಸ್ಯರಿಗೆ ಅಕ್ರಮವಾಗಿ ಹಾಲಿನ ಬಟವಾಡೆ ಮಾಡಿ ಸರ್ಕಾರಿ ಕಾಯ್ದೆ ಉಲ್ಲಂಘನೆ ಮಾಡಲಾಗಿದೆ.  ನಕಲಿ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ, ಸರ್ಕಾರದ ಸಹಾಯಧನ ನಕಲಿ ಖಾತೆಗಳಿಗೆ ಜಮೆ, ಸರ್ಕಾರಕ್ಕೆ ವಂಚನೆ. ಹಾಲಿಗೆ ನೀರನ್ನು ಬೆರೆಸಿ, ಕಲಬೆರಕೆ ಆಹಾರ ಕಾಯ್ದೆ ಉಲ್ಲಂಘನೆ ಹಾಗೂ ಹಾಲಿನ ತೂಕದಲ್ಲಿ ಮೋಸಮಾಡಿ ನಕಲಿ ಖಾತೆಗಳ ಸೃಷ್ಟಿ, ತೂಕ ಮತ್ತು ಮಾಪನ ನಿಯಮಗಳನ್ನು ಉಲ್ಲಂಘನೆ ಮಾಡಿರುತ್ತಾರೆ. ಎಲ್ಲಾ ಅಕ್ರಮ ಅವ್ಯವಹಾರಗಳ ಮೇಲೆ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಲಾಯಿತು.

  ಸಂದರ್ಭದಲ್ಲಿ ರೈತ ಮುಖಂಡರಾದ ಹಾಲೇಶ್, ರಾಜಣ್ಣ, ಅಜಗರ್, ಎಂ ತಿಪ್ಪೇಸ್ವಾಮಿ, ಪುರುಷೋತ್ತಮ ತೋರಣಘಟ್ಟ ಸೇರಿದಂತೆ ಹಲವರು ಹಾಜರಿದ್ದರು

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 08-09-2026ಮನುಷ್ಯರನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸಬಾರದು ಶ್ರೀ ಶಾಂತವೀರ ಶರಣರು.!ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ-ಬಾಹೂರ ಬೊಮ್ಮಣ್ಣ  ಅವರ ವಚನ.!ಹೆಣ್ಣು ಮನಸ್ಸು ಮಾಡಿದರೆ ಏನ್ನನಾದರೂ ಸಾಧನೆಮಾಡಬಹುದು: ಮಾದಾರ ಚನ್ನಯ್ಯ ಶ್ರೀರೈತರೊಂದಿಗೆ ಸಂವಾದ: ಚಿತ್ರದುರ್ಗ ಶಾಖಾ ಕಾಲುವೆಗೆ ಪುನಃ ನೀರು ಹರಿಸಿದ ಸಚಿವ ಟಿ. ರಘುಮೂರ್ತಿಹಿರೇಕಬ್ಬಿಗೆರೆ ಹಾಲು ಉತ್ಪಾದಕರ ಸಂಘದಲ್ಲಿ ಅಕ್ರಮ ವ್ಯವಹಾರ.!ಶ್ರೀ ಬಸವೇಶ್ವರ ದೇವಸ್ಥಾನದಲ್ಲಿನ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ.!ಮಲಯಾಳಂ ಶತ್ರುನಾಶ ತಂತ್ರ ಭಾನುವಾರದ ದಿನ ಮಾಡಿ ಐದು ದಿನಗಳಲ್ಲಿ ಕೆಲಸ ಆಗುತ್ತದೆ5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಬ್ಯಾಂಕ್ ನೌಕರರು ಸೆ.11 ರಂದು ಪ್ರತಿಭಟನೆ