LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಮಹರ್ಷಿ ವಾಲ್ಮೀಕಿ ರಾಮಾಯಣ ಮನುಕುಲದ ವಿಕಾಸಕ್ಕೆ ನಾಂದಿ ಎಸ್.ಸಂದೀಪ್

ಮಹರ್ಷಿ ವಾಲ್ಮೀಕಿ ರಾಮಾಯಣ ಮನುಕುಲದ ವಿಕಾಸಕ್ಕೆ ನಾಂದಿ ಎಸ್.ಸಂದೀಪ್

 

ಚಿತ್ರದುರ್ಗ : ಮಹರ್ಷಿ ವಾಲ್ಮೀಕಿ ಮನುಕುಲದ ವಿಕಾಸವನ್ನು ರಾಮಾಯಣದ ಮೂಲಕ ಕಟ್ಟಿಕೊಟ್ಟ ಮಹಾನ್ ವಿಚಾರವಾದಿ, ಚಿಂತಕರಾಗಿದ್ದರೆಂದು ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಸಂದೀಪ್ ತಿಳಿಸಿದರು.

ಮದಕರಿನಾಯಕ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಆಚರಿಸಲಾದ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮಿಕಿರವರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ವಾಲ್ಮೀಕಿರವರು ಬರೆದಿರುವ ರಾಮಾಯಣ ಒಂದು ಚಿಂತನ ಮಹಾ ಕಾವ್ಯವಾಗಿದೆ. ಒಳಿತು-ಕೆಡುಕು ಕಥೆಗಳನ್ನು ಪ್ರತಿಬಿಂಬಿಸುತ್ತದೆ. ಮಾನವನ ಅತಿ ಆಸೆಯೇ ಅವನತಿಯ ಮೂಲ. ಕೇವಲ ಮನುಷ್ಯರ ಹಿತವಲ್ಲದೆ ರಾಕ್ಷಸರು, ಹನುಮರು, ಜಟಾಯು, ವಾಲಿ, ಸುಗ್ರಿವ, ಅಳಿಲು ಹೀಗೆ ಸಕಲ ಪ್ರಾಣಿ ಪಕ್ಷಿಗಳ ಹಿತವನ್ನೊಳಗೊಂಡಂತೆ ಕಾವ್ಯವನ್ನು ಮೂಲವಾಗಿಸಿಕೊಂಡಿದ್ದರಿಂದ ಮಹಾನ್ ಮಾನವತಾವಾದಿ ಎನಿಸಿಕೊಂಡರು ಎಂದು ತಿಳಿಸಿದರು.

ಮನುಷ್ಯನ ದುಗುಡ, ದುಮ್ಮಾನ, ಸಂತೋಷ, ಸಂಭ್ರಮಗಳನ್ನು ಕುರಿತು ರಾಮಾಯಣ ಮಾತನಾಡುತ್ತದೆ. ಸತ್ಯ ಗೆಲ್ಲುತ್ತದೆ. ಸ್ವಾಭಿಮಾನ ಬದುಕಿನ ಅಂಗವಾಗಬೇಕೆಂಬ ಸಲಹೆ ನೀಡುತ್ತದೆ. 24 ಸಾವಿರ ಶ್ಲೋಕಗಳನ್ನು ಒಳಗೊಂಡಿರುವ ವಾಲ್ಮೀಕಿ ರಾಮಾಯಣದಲ್ಲಿನ ಪ್ರತಿಯೊಂದು ಶ್ಲೋಕವು ಮಾನವನ ಒಳಿತನ್ನೇ ಬಿಂಬಿಸುತ್ತವೆ. ಮುಖ್ಯವಾಗಿ ಆತ್ಮಾವಲೋಕನ ಮತ್ತು ಜವಾಬ್ದಾರಿಯುತ ನಿರ್ಧಾರಗಳು ಮನುಷ್ಯನನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬಲ್ಲವು ಎನ್ನುವುದು ರಾಮಾಯಣ ಮಹಾಕಾವ್ಯದಿಂದ ಹೊರಬರುತ್ತದೆ ಎಂದರು.

ತಾಯಿ ಹೃದಯದವರಾಗಿದ್ದ ಮಹರ್ಷಿ ವಾಲ್ಮೀಕಿ ರಾಮ ಸೀತೆಯನ್ನು ತ್ಯಜಿಸಿದಾಗ ಆಗ ಕಾಡಿನಲ್ಲಿ ಸೀತೆಗೆ ಆಶ್ರಯ ನೀಡಿದವರು ಇದೆ ವಾಲ್ಮೀಕಿ. ಅವರಿಗೆ ಅವಳಿ ಮಕ್ಕಳಾದಾಗ ಪಾಲನೆ ಪೋಷಣೆ ಮಾಡುತ್ತಾರೆ. ವಿಶ್ವಮಾನವ ಸಂಸ್ಕøತಿಗೆ ಕೌಟುಂಬಿಕ ನಾಗರೀಕತೆಯನ್ನು ಕಟ್ಟಿಕೊಟ್ಟ ಮಹಾನ್ ಚಿಂತಕ ಮಹರ್ಷಿ ವಾಲ್ಮೀಕಿ ಎಂದು ಬಣ್ಣಿಸಿದರು.

ಡಾ.ಲತ ಎಸ್. ಡಾ.ದಾಸಪ್ಪ ಜಿ, ಚಂದ್ರಣ್ಣ ಎನ್.ಡಿ, ಚಂದ್ರಣ್ಣ ಜಿ.ಬಿ, ಆರ್.ಮಂಜುಳ, ಮಹಂತೇಶ ಕೆ, ಹಾಲೇಶ್ ಇವರುಗಳು ವಾಲ್ಮೀಕಿ ಜಯಂತಿಯಲ್ಲಿ ಹಾಜರಿದ್ದರು.

ಮದಕರಿನಾಯಕ ವಿದ್ಯಾಸಂಸ್ಥೆಯಡಿಯಲ್ಲಿನ ಶಾಲಾ-ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿದ್ದರು.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟ್ರ್ಯಾಕ್ಟರ್‌ನಿಂದ ಅಪಘಾತ ಸಂಭವಿಸಿದ್ದರೆ ವಿಮಾ ಸಂಸ್ಥೆಯೇ ಪರಿಹಾರ ನೀಡಬೇಕು : ಹೈಕೋರ್ಟ್ ಮಹತ್ವದ ಆದೇಶ.!ಮಹರ್ಷಿ ವಾಲ್ಮೀಕಿ ರಾಮಾಯಣ ಮನುಕುಲದ ವಿಕಾಸಕ್ಕೆ ನಾಂದಿ ಎಸ್.ಸಂದೀಪ್ಸವದತ್ತಿ ಯಲ್ಲಮ್ಮ ದೇವಿ  ಭಕ್ತರಿಗೆ ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ.!LPG ಸಿಲಿಂಡರ್ ಇರುವವರು ಇದನ್ನು ಮಾಡಿಸಿಬೇಕು.! ಇಲ್ಲವಾದರೆ.?ಬಿದಿರಿನ ಕಡ್ಡಿಯ ಸಹಾಯದಿಂದ ಕಾಳಿ ದೇವಿಯ ಶಕ್ತಿಯಿಂದ ಈ ರೀತಿಯಾಗಿ ಶತ್ರುನಾಶದ ತಂತ್ರ ಮಾಡಬಹುದು!27-10-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿವಚನ.: -ವೀರ ಗೊಲ್ಲಾಳ/ಕಾಟಕೋಟನಿಮ್ಮ ಸಂಗಾತಿ ನಡುವೆ ಶಾಂತಿಭಂಗ ತರುವ `ಮದ್ಯ ಪ್ರೇಮಿ ಉಚ್ಟಾಟಣ ತಂತ್ರ'.!ಜಿಲ್ಲಾ ಪಂಚಾಯಿತಿ –ತಾಲ್ಲೂಕು ಪಂಚಯಿತ ಚುನಾವಣೆ ದಿನಾಂಕ ಫಿಕ್ಸ್ ..!ಕಿತ್ತೂರು ಉತ್ಸವದಲ್ಲಿ CM ಡಿಕೆಶಿ ಮಹತ್ವದ ಘೋಷಣೆ…!