ಸವದತ್ತಿ ಯಲ್ಲಮ್ಮ ದೇವಿ ಭಕ್ತರಿಗೆ ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ.!
ಬೆಳಗಾವಿ : ಬೆಳಗಾವಿಗೆ ಆಗಮಿಸಿದ CM DK ಶಿವಕುಮಾರ್ , ರೈತರೊಂದಿಗಿನ ಸಭೆಗೂ ಮುನ್ನ ಶೀಗೆ ಹುಣ್ಣಿಮೆ ಹಿನ್ನೆಲೆ ಸವದತ್ತಿ ತಾಲೂಕಿನ ಯಲ್ಲಮ್ಮ ದೇವಿ ದರ್ಶನ ಪಡೆದರು.
ಬಳಿಕ ಮಾತನಾಡಿದ ಅವರು, ₹215 ಕೋಟಿ ವೆಚ್ಚದಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಸವದತ್ತಿ ಯಲ್ಲಮ್ಮನ ದೇವಸ್ಥಾನ ಬಹಳ ಅಭಿವೃದ್ಧಿಯಾಗಿದೆ. ದೇವಸ್ಥಾನವನ್ನು ಪ್ರಾಧಿಕಾರ ಎಂದು ಘೋಷಣೆ ಮಾಡಲಾಗಿದೆ. ಪ್ರವಾಸೋದ್ಯಮ ಸಚಿವರು, ಶಾಸಕರ ನೇತೃತ್ವದಲ್ಲಿ ಸಮಿತಿ ಆಗಿದೆ ಎಂದು ಡಿಕೆಶಿ ಹೇಳಿದರು.