ಚಿತ್ರದುರ್ಗ: ಜಿಲ್ಲೆಯಲ್ಲಿ ಅಧಿಸೂಚಿಸಿದ ಬೆಳೆಗಳ ಪೈಕಿ ರಾಗಿ ಬೆಳೆಗೆ ಮಾತ್ರ ಆಗಸ್ಟ್ 14ರ ವರೆಗೆ ಬೆಳೆ ವಿಮೆ ನೊಂದಣಿಗೆ ಅವಕಾಶವಿದೆ. ತಾಲ್ಲೂಕಿನ ನಾಯಕನಹಟ್ಟಿ ಹೋಬಳಿ ಸೇರಿದಂತೆ, ಬೆಳೆ ವಿಮೆ ಮಾಡಿಸದ ಜಿಲ್ಲೆಯ ಎಲ್ಲಾ ರೈತರು ರಾಗಿ ಬೆಳೆಗೆ ವಿಮಾ ನೊಂದಣಿ ಮಾಡಿಸುವಂತೆ ಸಚಿವ ಟಿ.ರಘಮೂರ್ತಿ ಮನವಿ ಮಾಡಿದರು.
ರಾಗಿ ಬೆಳೆ ವಿಮೆಗೆ ರೈತರ ವಂತಿಕೆ ರೂ.318 ಗಳಾಗಿದ್ದು,ವಿಮೆ ಮಾಡಿಸಿದ ರೈತರಿಗೆ ಬಿತ್ತನೆ ವೈಫಲ್ಯದಡಿ ರೂ.3500 ರಿಂದ ರೂ.4000 ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ರಾಮಪ್ಪ, ಉಪವಿಭಾಗಾಧಿಕಾರಿ ಜೆ.ಕಾಂತರಾಜ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ, ತಹಶಿಲ್ದಾರ ರಹೆಮಾನ್ ಪಾಷ ಸೇರಿದಂತೆ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.