ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ 99.84% ಪೂರ್ಣಗೊಂಡಿದೆ. ರಾಜ್ಯದಲ್ಲಿ 5,54,32,314 ಕೋಟಿ ಮತದಾರರಿದ್ದು, ಎಲ್ಲ 5.54ಕೋಟಿ ಎಣಿಕೆ ನಮೂನೆ ಮುದ್ರಿಸಿ BLOಗಳಿಗೆ ವಿತರಿಸಲಾಗಿದೆ.
ಈ ಪೈಕಿ 6,88,525 ಮತದಾರರು ಆನ್‌ಲೈನ್‌ನಲ್ಲಿ ನಮೂನೆ ಸಲ್ಲಿಸಲಾಗಿದೆ. 4,43,04,632 ಮತದಾರರ ವಿವರ ಡಿಜಿಟಲೀಕರಣವಾದರೆ, 1,11,07,461 ದಾಖಲೆ ASDDO ಪರಿಶೀಲನಾ ವರ್ಗಕ್ಕೆ ಸೇರಿವೆ. 16,30,753 ಮತದಾರರು ಪತ್ತೆಯಾಗಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಅನ್ಸುಕುಮಾರ್ ತಿಳಿಸಿದ್ದಾರೆ.