LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಗವಿಸಿದ್ಧೇಶ್ವರ ಸ್ವಾಮೀಜಿ ಹನ್ನೊಂದು ದಿನಗಳ ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ..!

ಗವಿಸಿದ್ಧೇಶ್ವರ ಸ್ವಾಮೀಜಿ ಹನ್ನೊಂದು ದಿನಗಳ ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ..!

 

 

ಮೈಸೂರು: ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಚಾಮುಂಡಿಬೆಟ್ಟದಲ್ಲಿ ಭಾನುವಾರ ಬೆಳ್ಳಿರಥದಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಹನ್ನೊಂದು ದಿನಗಳ ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ನಾಡಹಬ್ಬದ ವೇದಿಕೆಯಲ್ಲಿ ನಾಡಿನ ನೆಲ, ಜಲ, ಪರಿಸರ ಸಂರಕ್ಷಣೆ ಪಾಠದ ಜೊತೆಗೆ ಕನ್ನಡ ನೆಲದ ಸಂಸ್ಕೃತಿಯ ಮಹತ್ವದ ಜ್ಞಾನವನ್ನೂ ಉಣಬಡಿಸಿದರು. ಸರ್ಕಾರಗಳು ನಾಡಿನ ಮಣ್ಣು, ನೀರು, ಪರಿಸರ, ನದಿಗಳು ಮತ್ತು ನದಿಮೂಲಗಳನ್ನು ರಕ್ಷಿಸಬೇಕು. ಕೃಷ್ಣೆ, ತುಂಗಭದ್ರೆ, ಕಾವೇರಿ ನದಿಗಳು ಬತ್ತಿ ಹೋದರೆ ವಿದೇಶದಿಂದ ಆಮದು ಮಾಡಿಕೊಳ್ಳಲು ಆಗುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು.

ಜನರಿಗೆ ‌ಬದುಕುವ ಹಕ್ಕು ಕೊಟ್ಟಿದ್ದು ಸರ್ಕಾರಗಳಲ್ಲ, ನಿಸರ್ಗ. ಬದುಕುವ ಹಕ್ಕು ಕಿತ್ತುಕೊಳ್ಳುತ್ತಿದ್ದಾರೆ ಎಂಬ ಭಾವನೆ ಜನರಲ್ಲಿ ಬಾರದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ನಾಡಿಗೆ ಕೊಡುಗೆ ನೀಡಿದ ಮಹನೀಯರ ಮಾತುಗಳನ್ನು ಭಾಷಣದ ಉದ್ದಕ್ಕೂ ಉಲ್ಲೇಖಿಸಿದ ಅವರು, ‘ಗೂಗಲ್‌ನಿಂದ ಏನನ್ನು ಬೇಕಾದರೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆದರೆ, ಅನ್ನ, ಸಾರನ್ನು ಮಾಡಿಕೊಳ್ಳಲಾಗದು. ಅದು ಬರುವುದು ರೈತನ ಬೆವರಿನಿಂದಲೇ ಮತ್ತು ಈ ಮಣ್ಣಿನಿಂದಲೇ. ಅಂತಹ ಮಣ್ಣನ್ನು  ನಾವು ರಕ್ಷಿಸಬೇಕಲ್ಲವೇ ಎಂದು ಕೇಳಿದರು. ಜೊತೆಗೆ ಅಣೆಕಟ್ಟೆಗಳು ನಾಡಿನ ಜನರ ಅನ್ನದ ತಟ್ಟೆಗಳು ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ: 37 ಕ್ಷೇತ್ರದ ಮೀಸಲಾತಿ ಪಟ್ಟಿ ವಿವರ ಇಲ್ಲಿದೆ.!ಗಂಡ ಪರ ಸ್ತ್ರಿಯ ಸಹವಾಸದಲ್ಲಿ ಇದ್ದು ಅಕ್ರಮ ಅನೈತಿಕ ಸಂಬಂಧಗಳಿಂದ ನಿಮ್ಮ ಜೀವನ ಹಾಳಾಗುತ್ತಿದ್ದರೆ ಈ ಸರಳ ಪ್ರಯೋಗಗಳನ್ನು ಪಾಲನೆ ಮಾಡಿ!ಗವಿಸಿದ್ಧೇಶ್ವರ ಸ್ವಾಮೀಜಿ ಹನ್ನೊಂದು ದಿನಗಳ ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ..!ಕಣಿವೆಮಾರಮ್ಮನಿಗೆ ದಸರಾ ನವರಾತ್ರಿಯ ಮೊದಲನೆ ಅಲಂಕಾರ.!ದಸರಾ ಹಬ್ಬದ ನವರಾತ್ರಿಯನ್ನು ಗೊಂಬೆಗಳ ಹಬ್ಬನು ಹೌದು.!-ಮುಕ್ತಾಯಕ್ಕ ಅವರ ವಚನ.!ಸರ್ವ ಸಿದ್ದಿ, ಇಷ್ಟಾರ್ಥ ಸಿದ್ದಿ, ಸರ್ವವಶೀಕರಣ, ಸರ್ವಾರಿಷ್ಟ ವಿಗ್ನ ಪರಿಹಾರಕ ಶ್ರೀ ಶಿವ ಪಂಚಾಕ್ಷರಿ ಮಹಾ ಯಂತ್ರ.ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಗಮನಿಸಬೇಕಾದ ಮುಖ್ಯ ಮಾಹಿತಿ.ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 11-10-2026-ನಗೆಯ ಮಾರಿತಂದೆ ಅವರ ವಚನ.!