ಬೆಂಗಳೂರು: ಡ್ರೈವಿಂಗ್ ಲೈಸೆನ್ಸ್ ನಡೆಸುವ ಆನ್ಲೈನ್ ಮೌಲ್ಯಮಾಪನ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಗತ್ಯವಿರುವ ಅಂಕಗಳನ್ನು 60% ರಿಂದ ಶೇಕಡಾ 75ಕ್ಕೆ ಹೆಚ್ಚಿಸಲು ಕೇಂದ್ರವು ಪ್ರಸ್ತಾಪಿಸಿದೆ. ಕನಿಷ್ಠ 30 ನಿಮಿಷಗಳ ಅವಧಿಯ ಚಾಲನಾ ಜಾಗೃತಿ ಪಾಠವನ್ನು ಕಡ್ಡಾಯಗೊಳಿಸಿದೆ.
ಹೆಸರು, ವಿಳಾಸ ಬದಲಾವಣೆಗಾಗಿ ಸಲ್ಲಿಸುವ ಅರ್ಜಿಗಳನ್ನು ಅಧಿಕಾರಿಗಳು 15 ದಿನಗಳ ಒಳಗೆ ನಿರ್ಧಾರ ಕೈಗೊಳ್ಳಬೇಕು; 30 ದಿನದೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಆ ಅರ್ಜಿಗಳು ಅನುಮೋದನೆಗೊಂಡಿವೆ ಎಂದು ಪರಿಗಣಿಸಲಾಗುತ್ತದೆಯಂತೆ