ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ದ. ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು (ಅ. 22) ರಂದು ರಜೆ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶಿಸಿದ್ದಾರೆ.
ಬೇರೆ ಊರುಗಳಿಗೆ ತೆರಳಿರುವ ಮಕ್ಕಳು & ಪೋಷಕರು ವಾಪಸ್ ಊರಿಗೆ ಬಂದು ತಲುಪಲು ವಿಳಂಬವಾಗುವುದರಿಂದ ಮರು ದಿನವೇ 22 ರಂದು ಶಾಲೆಗಳು ಪುನಾರಂಭವಾಗುವುದರಿಂದ ಮಕ್ಕಳಿಗೆ ಶಾಲೆಗೆ ಹಾಜರಾಗುವುದು ಕಷ್ಟವಾಗುತ್ತದೆ. ಹೀಗಾಗಿ ದಸರಾ ರಜೆ ವಿಸ್ತರಿಸಬೇಕು ಎಂದು ಪೋಷಕರು ಅಧಿಕಾರಿಗಳಿಗೆ ಕರೆ ಮಾಡಿ ಮನವಿ ಮಾಡಿದ್ದರು.