ಚಿತ್ರದುರ್ಗ: ಮಾದಕ ವಸ್ತುಗಳ ದುಶ್ಚಟಗಳಿಗೆ ಒಮ್ಮೆದಾಸರಾದರೆಅದರಿಂದ ಹೊರಬರುವುದುಕಷ್ಟಸಾಧ್ಯಎಂದು ಡಯಟ್ ಉಪನ್ಯಾಸಕ ಎಸ್.ಬಸವರಾಜು ಹೇಳಿದರು.
ಅವರು ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳು ಮತ್ತುಡಯಟ್‌ನ ಶೈಕ್ಷಣಿಕ ಚಟುವಟಿಕೆಗಳು ವಿಷಯಕುರಿತು ಚಳ್ಳಕೆರೆ ವೇದಾವತಿ ಬಿ.ಇಡಿಕಾಲೇಜಿನ ಪ್ರಶಿಕ್ಷಣಾರ್ಥಿಗಳಿಗೆ ಡಯಟ್‌ನಲ್ಲಿ ಆಯೋಜಿಸಿದ್ದ ಮಾಹಿತಿಕಾರ್ಯಾಗಾರದಲ್ಲಿ ಮಾತನಾಡಿದರು.
ತಂಬಾಕಿನಗುಟುಕುಆರೋಗ್ಯಕ್ಕೆಕೆಡುಕುAಟು ಮಾಡುತ್ತದೆ.ಮಾದಕ ವಸ್ತುಗಳ ಬಳಕೆಯಿಂದ ಮೆದುಳಿನಲ್ಲಿ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಅರೋಗ್ಯ ಹಾಳಾಗುವುದರ ಜತೆಗೆಕುಟುಂಬದಲ್ಲಿ ನೆಮ್ಮದಿಯೂ ಹಾಳಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಪ್ರೌಢಶಾಲೆ ಹಂತವುಜೀವನದ ಪ್ರಮುಖಘಟ್ಟವಾಗಿದ್ದು ಶಿಕ್ಷಕರಾಗುವವರು ವಿದ್ಯಾರ್ಥಿಗಳಲ್ಲಿ ಉತ್ತಮ ಹವ್ಯಾಸ ಬೆಳೆಸುವ ಮೂಲಕ ಸಕಾರಾತ್ಮಕಚಿಂತನೆ ಬೆಳೆಸಿಕೊಳ್ಳಲು ಪ್ರೇರೇಪಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸಿ ಸ್ವಾಸ್ಥö್ಯ ಸಮಾಜ ನಿರ್ಮಾಣ ಮಾಡಬೇಕುಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
ಡಯಟ್‌ನ ಹಿರಿಯಉಪನ್ಯಾಸಕತಿಪ್ಪೇಸ್ವಾಮಿ, ವೇದಾವತಿ ಬಿ.ಇಡಿಕಾಲೇಜಿನಉಪನ್ಯಾಸಕರಾದ ಶ್ರೀನಿವಾಸ್, ತಿಪ್ಪಮ್ಮ ಮತ್ತು ಪ್ರಶಿಕ್ಷಣಾರ್ಥಿಗಳು ಇದ್ದರು.