LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಮಹಿಳೆಯರಿಗೆ ಸ್ವಯಂ ಉದ್ಯೋಗ : 30 ದಿನಗಳ ವಿಷಯಧಾರಿತ ಬ್ಯೂಟಿಷಿಯನ್ ಉದ್ಯಮಶೀಲತಾಭಿವೃದ್ಧಿ ತರಬೇತಿ.

ಮಹಿಳೆಯರಿಗೆ ಸ್ವಯಂ ಉದ್ಯೋಗ : 30 ದಿನಗಳ ವಿಷಯಧಾರಿತ ಬ್ಯೂಟಿಷಿಯನ್ ಉದ್ಯಮಶೀಲತಾಭಿವೃದ್ಧಿ ತರಬೇತಿ.!

 

ದಾವಣಗೆರೆ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಧಾರವಾಡ ಸಿಡಾಕ್,ದಾವಣಗೆರೆ ಹಾಗೂ ಅನಾವರಣ ನಗರ ಮತ್ತು ಗ್ರಾಮೀಣ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗಾಗಿ ಉಚಿತ ಬ್ಯೂಟಿಷಿಯನ್ ಉದ್ಯಮಶೀಲತಾ ತರಬೇತಿಯನ್ನು ಆಯೋಜಿಸಿದೆ. 

ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಛಿಸುವ  ಜಿಲ್ಲೆಯ ಆಸಕ್ತ ಮಹಿಳಾ ಉದ್ಯಮ ಆಕಾಂಕ್ಷಿಗಳು ಅಕ್ಟೋಬರ್ 6 ರಿಂದ ನವೆಂಬರ್ 13 ರವರೆಗೆ 30 ದಿನಗಳ ಕಾಲ 'ಅನಾವರಣ ನಗರ ಮತ್ತು ಗ್ರಾಮೀಣ ಕೌಶಲ್ಯ ಅಭಿವೃದ್ಧಿ ಸಂಸ್ಥೆ, ದಾವಣಗೆರೆ' ಯಲ್ಲಿ  ತರಬೇತಿ ನಡೆಯಲಿದೆ. 

ಬ್ಯೂಟಿಷಿಯನ್ ಪ್ರಾಯೋಗಿಕ ತರಬೇತಿ, ಉದ್ಯಮಶೀಲರ ಗುಣಲಕ್ಷಣಗಳು,ಉದ್ಯಮ ಶೀಲತೆಯ ಅಭಿವೃದ್ಧಿಗೆ ಅವಶ್ಯವಿರುವ ಸಾಧನಾ ಪ್ರೇರಣ ತರಬೇತಿ , ಉದ್ಯಮ ಸ್ಥಾಪಿಸಲು ಅನುಸರಿಸಬೇಕಾದ ಹಂತಗಳು, ಉದ್ಯಮ ಅವಕಾಶಗಳನ್ನು ಗುರುತಿಸುವುದು, ಉದ್ಯಮ ಆಯ್ಕೆಯ ವಿಧಾನ,ಮಾರುಕಟ್ಟೆ ಹಾಗೂ ಹಣಕಾಸು ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ ಮತ್ತು ಸಣ್ಣ ಉದ್ಯಮ ನಿರ್ವಹಣೆ ಸರ್ಕಾರದ ಸ್ವಯಂ ಉದ್ಯಮ ಯೋಜನೆಗಳು,ಯೋಜನಾ ವರದಿ ತಯಾರಿಕೆ, ಹಾಗೂ ಇತ್ಯಾದಿ ವಿಷಯಗಳ ಕುರಿತು ತಜ್ಞರಿಂದ ಉಪನ್ಯಾಸ ನೀಡಲಾಗುವುದು ಹಾಗೂ

ತರಬೇತಿಯ ಅವಧಿಯಲ್ಲಿ ಯಶಸ್ವಿ ಉದ್ಯಮಿಗಳೊಂದಿಗೆ ಸಂವಾದ ನಡೆಸಲು ಅವಕಾಶವಿದ್ದು, ತರಬೇತಿಯ ನಂತರ ಸ್ವಂತ ಉದ್ಯಮ ಪ್ರಾರಂಭಿಸಲು ಅಗತ್ಯ ಬೆಂಬಲ ಸೇವೆಗಳನ್ನು ಒದಗಿಸಲಾಗುವುದು , 18 ರಿಂದ 45 ವರ್ಷ ವಯೋಮಿತಿಯ, 10 ನೇ ತರಗತಿ ಪಾಸಾದ ಜಿಲ್ಲೆಯ ಆಸಕ್ತ ಮಹಿಳೆಯರು ಭಾಗವಹಿಸಬಹುದು.

ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಭರ್ತಿ ಮಾಡಿದ ಅರ್ಜಿಯೊಂದಿಗೆ 2 ಪಾಸ್‌ಪೋರ್ಟ್ ಅಳತೆಯ ಫೋಟೋ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಮತ್ತು ಪಡಿತರ ಚೀಟಿಯ ಪ್ರತಿಯನ್ನು   ಉಪ ನಿರ್ದೇಶಕರ ಕಚೇರಿ, ಸಿಡಾಕ್, ಪ್ಲಾಟ್ ನಂ : 76ಎ -(ಪಿ 1),ಕರೂರು ಕೈಗಾರಿಕ ಪ್ರದೇಶ, ಪಿ. ಬಿ ರಸ್ತೆ ದಾವಣಗೆರೆ - 577006, ಕಚೇರಿಗೆ ಲಗತ್ತಿಸಬೇಕು ಎಂದು ದಾವಣಗೆರೆ ಸಿಡಾಕ್ ಉಪ ನಿರ್ದೇಶಕರು ತಿಳಿಸಿದ್ದಾರೆ.

(AI ಚಿತ್ರ)

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರಿಕಾಳು ಮೆಣಸಿನಿಂದ ಈ ತಂತ್ರ ಮಾಡಿದರೆ ಸ್ತ್ರೀ ಪುರುಷ ವಶೀಕರಣ ವಾಗುತ್ತದೆ ಒಳ್ಳೆಯ ಉದ್ದೇಶಕ್ಕೆ ಇಷ್ಟ ಪಟ್ಟಂತ ವ್ಯಕ್ತಿಗಳಿಗಾಗಿ ಈ ತಂತ್ರ ಮಾಡಿ!ನೀವು SBI ಬ್ಯಾಂಕಿನ ಗ್ರಾಹಕರು ಆಗಿದ್ದರೆ ತಮ್ಮದೆ ಈ ಸುದ್ದಿಯನ್ನು ಓದಿ.!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ  25-09-2026ಮಹಿಳೆಯರಿಗೆ ಸ್ವಯಂ ಉದ್ಯೋಗ : 30 ದಿನಗಳ ವಿಷಯಧಾರಿತ ಬ್ಯೂಟಿಷಿಯನ್ ಉದ್ಯಮಶೀಲತಾಭಿವೃದ್ಧಿ ತರಬೇತಿ.ವಚನ: --ಸಿದ್ಧರಾಮೇಶ್ವರನೀವು ಇಷ್ಟಪಟ್ಟಂತೆ ಪ್ರೀತಿಸಿದವರನ್ನು ಮದುವೆಯಾಗಬೇಕೆಂದರೆ ಈ ದೇವರನ್ನು ಪೂಜಿಸಿ ಸಾಕು! ನಿಮ್ಮ ಕಾರ್ಯ ಸಫಲವಾಗುತ್ತದೆ?ಚಿತ್ರದುರ್ಗ: ನೂತನ ಎಸ್.ಪಿ ಆಗಿ ಕುಶಾಲ್ ಚೌಕ್ಸೆ.!ಪಿಯುಸಿ ಅಥವಾ ಯಾವುದೇ ಪದವಿ ಪಡೆದ ಯುವಕ ಯುವತಿಯರಿಗೆ ಇಲ್ಲಿದೆ ಜಾಬ್.!ಪೌರ ಕಾರ್ಮಿಕರ ದಿನಾಚರಣೆ: ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮುಖ್ಯ.! ಬಿ.ಟಿ.ಕುಮಾರಸ್ವಾಮಿಮದ್ಯಪಾನ ನಿಷೇಧದ : ಜನಾಂದೋಲನ ರೂಪಿಸಲು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ