ಡಿ.ಕೆ. ಶಿವಕುಮಾರ್ ಮುಂದಿನ 10 ವರ್ಷಗಳ ಕಾಲ ಸಿಎಂ.! ಶ್ರೀಗಳು ಹೇಳಿದ್ದು.!
ಗದಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 2028ರ ಬಳಿಕ ಸುಮಾರು 10 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುತ್ತಾರೆ ಎಂದು ನೊಣವಿನಕೆರೆ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿ ಮಂದಿರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಗಳು ಈ ಹೇಳಿಕೆ ನೀಡಿದ್ದಾರೆ.
“ಡಿ.ಕೆ. ಶಿವಕುಮಾರ್ ಅವರಿಗೆ ಹಲವಾರು ಅಡೆತಡೆಗಳಿವೆ. ಆದರೂ ಅವರ ಹಿಂದೆ ನಾವಿದ್ದೇವೆ. ರಕ್ಷಾ ಕವಚವಾಗಿ ಅವರನ್ನು ನಾವು ಕಾಪಾಡುತ್ತೇವೆ. ಅವರು ಎಂದಿಗೂ ಜಯಶೀಲರಾಗಿರುತ್ತಾರೆ” ಎಂದು ಶ್ರೀಗಳು ಹೇಳಿದ್ದಾರೆ.