ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ವಾದ್ಯಕ್ಕೆ ಬಂಧವಲ್ಲದೆ, ನಾದಕ್ಕೆ ಬಂಧವುಂಟೆ ?
ಅರಿವಿಂಗೆ ಬಂಧವಲ್ಲದೆ, ಅರುಹಿಸಿಕೊಂಬವಂಗುಂಟೆ ಬಂಧ ?
ಅರಿದೆಹೆನೆಂಬ ಭ್ರಮೆ, ಅರುಹಿಸಿಕೊಂಡೆಹೆನೆಂಬ ಕುರುಹು,
ಉಭಯನಾಸ್ತಿಯಾಗಿಯಲ್ಲದೆ ಭಾವಶುದ್ಧವಿಲ್ಲ,ಕಾಮಧೂಮ ಧೂಳೇಶ್ವರಾ.
[7:05 AM, 9/21/2021] ರುದ್ರಮೂರ್ತಿ: ಕಾಲ ಮೇಲೆ ಬಂದ ಮಾರಿ ಕಾಡುತ್ತಿದೆ ಜಗವೆಲ್ಲವ.
ಕಾಲವೆಂಬ ಕಾಯವನರಿದು,
ಮನವೆಂಬ ಮಾರಿಯ ಭವಗೆಡಿಸಿ
ನಾ ತಂದೆ ಜ್ಞಾನಶಕ್ತಿಯ.
ಆ ಶಕ್ತಿಯ ಧರ್ಮದಲ್ಲಿ ಮುಕ್ತಿಯ ಗಳಿಸಬಲ್ಲಡೆಕಾಲಾಂತಕ ಭೀಮೇಶ್ವರಲಿಂಗವು ಅವರವರಂಗಕ್ಕೆಹಿಂಗದಿಪ್ಪನು.
-ಡಕ್ಕೆಯ ಬೊಮ್ಮಣ್ಣ