ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಗೌರವಾನ್ವಿತ ಸದಸ್ಯರುಗಳಿಗೆ ಈ ಪತ್ರವನ್ನು ಕಳುಹಿಸಿರುತ್ತೇವೆ. ಇದನ್ನು ತಾವು ಪ್ರಕಟಿಸುವಂತೆ ಕೋರಿಕೆ*
.
ಇವರಿಗೆ
ಲೋಕಸಭಾ ಮಾನ್ಯ ಸದಸ್ಯರು
ರಾಜ್ಯಸಭಾ ಮಾನ್ಯ ಸದಸ್ಯರು
(ಕರ್ನಾಟಕ ರಾಜ್ಯ ಪ್ರತಿನಿಧಿಗಳು)
ವಿಷಯ: ಸಂಸತ್ ಅಧಿವೇಶನದ ಉಭಯ ಸದನಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಸದಸ್ಯರು ಭದ್ರಾ ಮೇಲ್ದಂಡೆ ಯೋಜನೆ ಸಂಬಂಧ ಧ್ವನಿಯೆತ್ತುವಂತೆ ಕೋರಿಕೆ.
ಮಾನ್ಯರೇ
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಲೋಕಸಭೆ-ರಾಜ್ಯಸಭೆ ಎಲ್ಲ ಸದಸ್ಯರು ಸಂಸತ್ ಚಳಿಗಾಲ ಅಧಿವೇಶನದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ, ರಾಷ್ಟಿçÃಯ ಮನ್ನಣೆ ನೀಡುವಂತೆ ಹಾಗೂ ಕೆಲ ತಾಂತ್ರಿಕ ಅನುಮತಿ ಪ್ರಕ್ರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಧ್ವನಿಮೊಳಗಿಸಬೇಕಾಗಿದೆ. ಈ ಮೂಲಕ ಬಯಲುಸೀಮೆ ಜನರ ಐದು ದಶಕದ ಹೋರಾಟಕ್ಕೆ ಸ್ಪಂದಿಸುವAತೆ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಕೋರುತ್ತದೆ.
ಜಿಲ್ಲೆಯ ಜನಪ್ರತಿನಿಧಿಗಳು, ಮಠಾಧೀಶರು, ಸಂಘ-ಸAಸ್ಥೆಗಳ ಬೆಂಬಲದೊAದಿಗೆ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ 1997ರಿಂದ ನಿರಂತರವಾಗಿ ನಡೆಸಿದ ಹೋರಾಟದ ಫಲ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಎಲ್ಲ ಪಕ್ಷಗಳು ಸರ್ಕಾರಗಳು ತಮ್ಮ ಅಧಿಕಾರವಧಿಯಲ್ಲಿ ಶ್ರಮಿಸಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ ಬಿಜೆಪಿ ರಾಷ್ಟಿçÃಯ ಹಾಗೂ ರಾಜ್ಯದ ನಾಯಕರು ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟಿçÃಯ ಮನ್ನಣೆ ನೀಡುವುದಾಗಿ ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ಬಯಲುಸೀಮೆ ಜನರಿಗೆ ಮಾತು ಕೊಟ್ಟಿದ್ದರು. ಬಳಿಕ 2023-24ರ ಕೇಂದ್ರ ಬಜೆಟ್‌ನಲ್ಲಿ 5,300 ಕೋಟಿ ರೂ. ಅನುದಾನ ಘೋಷಿಸಲಾಗಿತ್ತು. ಬಯಲುಸೀಮೆ ಜನರ ಹಿತ ಕಾಯಲು ಕೇಂದ್ರ ಸರ್ಕಾರದ ಈ ನಿರ್ಧಾರ ಬರಡು ನೆಲದ ಜನರಲ್ಲಿ ಸಂಭ್ರಮಕ್ಕೆ ಕಾರಣವಾಗಿತ್ತು.
2020ರಲ್ಲಿ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ರಾಷ್ಟಿçÃಯ ಯೋಜನೆಯೆಂದು ಘೋಷಿಸುವಂತೆ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಿಕೊಟ್ಟಿದ್ದರು.
ಜೊತೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಕೂಡ ರಾಷ್ಟಿçÃಯ ಯೋಜನೆಯನ್ನಾಗಿ ಘೋಷಿಸುವುದಾಗಿ ಭರವಸೆ ನೀಡಿದ್ದರು. 2022ರಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು, ರಾಷ್ಟಿçÃಯ ಯೋಜನೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ ಎಂದು ಹೇಳಿಕೆ ನೀಡಿದ್ದರು.
ಆದರೆ, ಇಲ್ಲಿಯವರೆಗೂ ಭರವಸೆ ಈಡೇರಿಲ್ಲ. ಈ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರತ್ಯಾರೋಪಗಳು ನಮಗೆ ಬೇಕಿಲ್ಲ. ಜಿಲ್ಲೆಯ ಜನರ ಕನಸು ಈಡೇರಬೇಕೆಂಬುದಷ್ಟೇ ನಮ್ಮ ಮನವಿ. ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಯನ್ನು ಸಂಪೂರ್ಣ ಹಸಿರನ್ನಾಗಿಸಲು ಅನುದಾನದ ಜತೆಗೆ ರಾಷ್ಟಿçÃಯ ಯೋಜನೆ ಮನ್ನಣೆ ಬೇಕಾಗಿದೆ.
ಕೃಷಿ ಸಿಂಚಾಯಿ ಯೋಜನೆ ವ್ಯಾಪ್ತಿಗೆ ಭದ್ರಾ ಮೇಲ್ದಂಡೆ ಸೇರಿಸುವುದಾಗಿ ಘೋಷಿಸಿ ವರ್ಷಗಳು ಉರುಳುತ್ತಿದ್ದರೂ ಅನುದಾನ ಬಿಡುಗಡೆ ಆಗಿಲ್ಲ. ಪದೇ ಪದೆ ಪರಿಷ್ಕೃತ ಪ್ರಸ್ತಾವನೆ ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರ ಬಯಲುಸೀಮೆ ಪ್ರದೇಶವನ್ನು ಹಸಿರುಗೊಳಿಸುವ ಕಾರ್ಯ ವಿಳಂಭಕ್ಕೆ ಕಾರಣವಾಗುತ್ತಿದೆ.
ಅದರಲ್ಲೂ ಅರಣ್ಯ ಪ್ರದೇಶದಲ್ಲಿ 50 ವಿದ್ಯುತ್ ಪ್ರಸರಣ ಗೋಪುರಗಳಲ್ಲಿ 48ಕ್ಕೆ ಅನುಮತಿ ನೀಡಿದ್ದು, ಇನ್ನೂ ಎರಡು ಗೋಪುರಗಳ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದು, ಅಂತಿಮ ಅನುಮತಿ ಪ್ರಕ್ರಿಯೆ ತಕ್ಷಣವೇ ಪೂರ್ಣಗೊಳಿಸಬೇಕು.
ಇದರಿಂದ ತುಂಗಾ ತಿರುವು ಮೂಲಕ ಭದ್ರಾ ಜಲಾಶಯಕ್ಕೆ 17.40 ಟಿಎಂಸಿ ಅಡಿ ನೀರು ಹರಿಯಲಿದೆ. ಈ ಕಾರ್ಯದಿಂದ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಜಲಾಶಯದಿಂದ ನೀರು ಹರಿಸಲು ಯೋಜನೆಯನ್ವಯ ಸಾಧ್ಯವಾಗಲಿದೆ.
ಆದ್ದರಿಂದ ಜನಪರ ಕಾಳಜಿ ಹೊಂದಿರುವ ರಾಜ್ಯದ ಸಂಸದರು, ರಾಜ್ಯಸಭೆ ಸದಸ್ಯರು ಸಂಸತ್ ಚಳಿಗಾಲ ಅಧಿವೇಶನದಲ್ಲಿ ಒಗ್ಗೂಡಿ ಧ್ವನಿಯೆತ್ತಬೇಕಿದೆ. ಈ ಮೂಲಕ ಬರಗಾಲದ ಸುಳಿಗೆ ಸದಾ ಸಿಲುಕುತ್ತಿರುವ ಚಿತ್ರದುರ್ಗ, ತುಮಕೂರು ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕು ಜನರ ಸಂಕಷ್ಟವನ್ನು ದೂರಗೊಳಿಸಲು ಮುಂದಾಗಬೇಕಿದೆ.
ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ಸಂಬAಧ ಸಂಸದರು, ರಾಜ್ಯಸಭೆ ಸದಸ್ಯರು ಸಂಸತ್‌ನಲ್ಲಿ ನೀಡುವ ಹೇಳಿಕೆಗೆ ಜಿಲ್ಲೆಯ ಜನರು, ಸಂಘ-ಸAಸ್ಥೆ, ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಬೆಂಬಲವಾಗಿರಲಿದೆ.
ಸದನಲ್ಲಿ ಈ ವಿಷಯ ಪ್ರಸ್ತಾಪಿಸಲು ಕೋರಿಕೆ
1. ರಾಷ್ಟಿçÃಯ ಯೋಜನೆ ಎಂದು ಘೋಷಿಸಬೇಕು
2. ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವಂತೆ 5,300 ಕೋಟಿ ರೂ. ಬಿಡುಗಡೆ
3. ತಾತ್ವಿಕ ಅನುಮೋದನೆ ದೊರೆತಿರುವ ವಿದ್ಯುತ್ ಪ್ರಸರಣ ಗೋಪುರಗಳ ನಿರ್ಮಾಣಕ್ಕೆ ಅಂತಿಮ ಅನುಮತಿ
(ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆ ಮರ ಕಟಾವು ಮಾಡಲು ಪರವಾನಗಿ ನೀಡಿ, ಗೋಪುರ ನಿರ್ಮಾಣಕ್ಕೆ ಅಂತಿಮ ಅನುಮತಿ ನೀಡಬೇಕು)
ಪಿ.ಕೋದಂಡರಾಮಯ್ಯ, ಮಾಜಿ ಸಂಸದರು
ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ
ಡಾ.ಬಂಜಗೆರೆ ಜಯಪ್ರಕಾಶ್
ಪ್ರಧಾನ ಸಂಚಾಲಕರು
ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ
ಮೊ.ನಂ. 9448233825
ಸಂಚಾಲಕರ ಸಮಿತಿ
ಚಳ್ಳಕೆರೆ ಬಸವರಾಜ್
ನರೇನಹಳ್ಳಿ ಅರುಣ್‌ಕುಮಾರ್
ಜೋಗಿಮಟ್ಟಿ ಮಹೇಶಬಾಬು