ಬೆಂಗಳೂರು; ಕಳೆದ ಹಲವು ದಿನಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ನೂತನ ಸಚಿವರ ಖಾತೆ ಹಂಚಿಕೆ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ರಾಜ್ಯ ಸರ್ಕಾರದಲ್ಲಿ 2ನೇ ಹಂತದ ಸಂಪುಟ ಪುನಾರಚನೆಯ ಬಳಿಕ ಸಚಿವರಿಗೆ ಇಲಾಖೆಗಳನ್ನು ಹಂಚಿಕೆ ಮಾಡುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಂತರ, ಇದೀಗ CM DK ಶಿವಕುಮಾರ್, 19 ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಈ ಕುರಿತ ಅಧಿಕೃತ ಪಟ್ಟಿಯನ್ನು ರಾಜ್ಯಪಾಲರ ಅಂಕಿತದೊಂದಿಗೆ ಸರ್ಕಾರವು ಗೆಜೆಟ್ ಅಧಿಸೂಚನೆಯ ಮೂಲಕ ಪ್ರಕಟಿಸಿದೆ.
ಯಾವ ಸಚಿವರಿಗೆ ಯಾವ ಖಾತೆ ಹಂಚಿಕೆ..2/2
*S.S ಮಲ್ಲಿಕಾರ್ಜುನ್- ಗಣಿ & ಭೂವಿಜ್ಞಾನ ಇಲಾಖೆ, * B. ನಾಗೇಂದ್ರ-ಯೋಜನೆ & ಸಾಂಖ್ಯಿಕ ಇಲಾಖೆ, * ನರೇಂದ್ರಸ್ವಾಮಿ-ಕೃಷಿ ಇಲಾಖೆ, * C ಪುಟ್ಟರಂಗಶೆಟ್ಟಿ-ಪಶು ಸಂಗೋಪನಾ ಇಲಾಖೆ, ರೇಷ್ಮೆ* T.ರಘುಮೂರ್ತಿ-ಪರಿಶಿಷ್ಟ ಪಂಗಡ ಕಲ್ಯಾಣ ಖಾತೆ, * ರಿಜ್ವಾನ್ ಅರ್ಷದ್- ಆಹಾರ & ನಾಗರಿಕ ಪೂರೈಕೆ ಇಲಾಖೆ, * ರುದ್ರಪ್ಪ ಲಮಾಣಿ- ಸಕ್ಕರೆ & ಜವಳಿ, * ಶಿವಲಿಂಗೇಗೌಡ-ಅಬಕಾರಿ, * ವಿಜಯಾನಂದ ಕಾಶಪ್ಪನವರ್- ಸಣ್ಣ ಕೈಗಾರಿಕೆ, * ಜಮೀರ್ ಅಹ್ಮದ್ ಖಾನ್-ವಸತಿ, * ಅಜಯ್ ಸಿಂಗ್-ಸಣ್ಣ ನೀರಾವರಿ, IT BT.
ಯಾವ ಸಚಿವರಿಗೆ ಯಾವ ಖಾತೆ ಹಂಚಿಕೆ..1/2
-*ಲಕ್ಷ್ಮಣ ಸವದಿ - ಸಹಕಾರ ಇಲಾಖೆ, * ರಾಮಲಿಂಗರೆಡ್ಡಿ- ಅರಣ್ಯ, * K.H ಮುನಿಯಪ್ಪ-ಸಮಾಜ ಕಲ್ಯಾಣ ಇಲಾಖೆ, * ಸಂತೋಷ್ ಲಾಡ್ -ಕಾರ್ಮಿಕ ಇಲಾಖೆ, * UT ಖಾದರ್ - ಆರೋಗ್ಯ & ಕಲ್ಯಾಣ ಇಲಾಖೆ, * ಶಿವರಾಜ್ ತಂಗಡಗಿ -ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ & ಸಂಸ್ಕೃತಿ ಇಲಾಖೆ, * ಬಸವರಾಜ ರಾಯರೆಡ್ಡಿ- ಉನ್ನತ ಶಿಕ್ಷಣ, * H.C ಬಾಲಕೃಷ್ಣ-ಪೌರಾಡಳಿತ, * K.S ಬಸವಂತಪ್ಪ-ಮುಜರಾಯಿ, ಮೀನುಗಾರಿಕೆ ಇಲಾಖೆ, * N.ಚಲುವರಾಯಸ್ವಾಮಿ - ಜಲಸಂಪನ್ಮೂಲ, * ಮಧು ಬಂಗಾರಪ್ಪ- ಪ್ರಾಥಮಿಕ & ಪ್ರೌಢ ಶಿಕ್ಷಣ.