ಧಾರವಾಡ: ಮಹಿಳೆಯೋರ್ವಳು ತನ್ನ ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಈ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ. ನಿವೇದಿತಾ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ಸವಿತಾ ಕುರಗುಂದ (35) ಮಕ್ಕಳಾದ ನಿವೇದಿತಾ(8), ಭಾಗ್ಯಶ್ರೀ(6) ಹಾಗೂ ಹರ್ಷಿತಾ(9)ಗೆ ವಿಷವುಣಿಸಿ, ಬಳಿಕ ತಾನೂ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಸದ್ಯ ಮೂವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸವಿತಾಳ ಸ್ಥಿತಿ ಗಂಭೀರವಾಗಿದೆ.