LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ತಹಸೀಲ್ದಾರ್ ₹50 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ.!

ತಹಸೀಲ್ದಾರ್ ₹50 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ.!

 

ಧಾರವಾಡ: ಜಮೀನಿನ ' ಖರಾಬ್' ಜಾಗ ತೆರವುಗೊಳಿಸಿ ಅಭಿವೃದ್ಧಿಪಡಿಸಲು ಅನುಮತಿ ನೀಡಲು ₹50 ಲಕ್ಷ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಅವರ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿ, ಅವರನ್ನು ರೆಡ್ಹ್ಯಾಂಡ್ಆಗಿ ವಶಕ್ಕೆ ಪಡೆದಿದ್ದಾರೆ. ಲಂಚದ ಹಣ ಪಡೆಯುತ್ತಿದ್ದಾಗಲೇ ಅಧಿಕಾರಿಗಳು ದಾಳಿ ನಡೆಸಿ ಬಲೆಗೆ ಕೆಡವಿದ್ದು, ಘಟನೆ ಜಿಲ್ಲಾದ್ಯಂತ ಭಾರಿ ಸಂಚಲನ ಮೂಡಿಸಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಮೂಲದ ಪರಮೇಶ್ವರ್ ಅಂಗಡಿ ಎಂಬುವವರು ಧಾರವಾಡ ತಾಲೂಕಿನ ಯರಿಕೊಪ್ಪ ಬಳಿ ಜಮೀನು ಖರೀದಿಸಿದ್ದರು. ಜಮೀನಿನಲ್ಲಿರುವ ' ಖರಾಬ್' ಜಾಗವನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸಲು ಅನುಮತಿ ಪತ್ರ ನೀಡಬೇಕಿದ್ದರೆ ₹1 ಕೋಟಿ ಲಂಚ ನೀಡಬೇಕು ಎಂದು ತಹಸೀಲ್ದಾರ್ ಸಚ್ಚಿದಾನಂದ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಪೈಕಿ ಮೊದಲ ಕಂತಾಗಿ ₹50 ಲಕ್ಷ ನೀಡಲು ಮಾತುಕತೆಯಾಗಿತ್ತು.

ಸಂತ್ರಸ್ತ ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಅಧಿಕಾರಿಗಳು ಪಕ್ಕಾ ಪ್ಲಾನ್ ರೂಪಿಸಿದ್ದರು. ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಮುಂಗಡ ಹಣವಾಗಿ ₹50 ಲಕ್ಷ ಸ್ವೀಕರಿಸುತ್ತಿದ್ದಂತೆಯೇ ಲೋಕಾಯುಕ್ತ ಸಿಬ್ಬಂದಿ ದಾಳಿ ನಡೆಸಿ ತಹಸೀಲ್ದಾರ್ರನ್ನು ವಶಕ್ಕೆ ಪಡೆದುಕೊಂಡಿದ್ದಾರೆ..

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರೆಗೆ ಸ್ವಾಗತ, ಸಮಗ್ರ ನೀರಾವರಿಗೆ ಹೋರಾಟ.! ಹುಣಸೆಕಟ್ಟೆ ಕಾಂತರಾಜ್ ಹೇಳಿಕೆ  ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 17-09-2026ತಹಸೀಲ್ದಾರ್ ₹50 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ.!ರಾಜ್ಯದಲ್ಲಿ ಬರ ಹಿನ್ನೆಲೆ: ರೈತರ ಬ್ಯಾಂಕ್ ಸಾಲ ಮರುಪಾವತಿಗೆ ವಿನಾಯಿತಿ ..!ಈ ದಿನಗಳಲ್ಲಿ ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧ.! ಹೊರ ಜಿಲ್ಲೆಯ ಡಿಜೆಗೆ ಪ್ರವೇಶವಿಲ್ಲ.!ಭೋವಿ ಅಭಿವೃದ್ಧಿ ನಿಗಮ: ಉಚಿತ ಟೈಲರಿಂಗ್ ತರಬೇತಿ ಹಾಗೂ ಯಂತ್ರೋಪಕರಣ ವಿತರಣೆಗೆ ಅರ್ಜಿಇಂದಿನಿಂದ ಸೆ.17 ರಿಂದ ವಿ.ವಿ.ಸಾಗರ ಬಲದಂಡೆ ನಾಲೆಗೆ ನೀರು ಬಿಡುಗಡೆ: ಮುನ್ನೆಚ್ಚರಿಕೆ..!-ಸುಂಕದ ಬಂಕಣ್ಣ ಅವರ ವಚನ.!ಜೀವನದಲ್ಲಿ ಎಲ್ಲಾ ಕೆಲಸ ಕಾರ್ಯಗಳು ದರಿದ್ರ ಯೋಗದಿಂದ ಶತ್ರುಗಳ ಬಾಧೆಯಿಂದ ದೃಷ್ಟಿಯಿಂದ ಅಡೆತಡೆಯಾಗುತ್ತಿದ್ದರೆ ಕೆಂಪು ಮೆಣಸಿನಕಾಯಿ ಇಂದ ಈ ಸರಳ ತಂತ್ರ ಮಾಡಿ!ಮತ್ತೆ ಶುರುವಯಿತು ನಗರದ ಮುಖ್ಯ ರಸ್ತೆ ಅಗಲೀಕರಣ ಕಟ್ಟಡ ಪರಿಹಾರ: ಸಚಿವ ಟಿ. ರಘುಮೂರ್ತಿ